ತಿ.ನರಸೀಪುರ ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬಡ ಕುಟುಂಬದವರಿಗೆ ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು. ಪಿ.ಸ್ವಾಮಿನಾಥ್ ಗೌಡ, ಸಂದೇಶ್, ಆರ್.ಚೇತನ್, ಕೆ.ಗಣೇಶ್, ಅರುಣ್ ಕುಮಾರ್, ಎ.ಜೆ.ವೆಂಕಟೇಶ್ ಇತರರು ಇದ್ದರು.  
ಮೈಸೂರು

ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿದ ಯತೀಂದ್ರ ಸಿದ್ದರಾಮಯ್ಯ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ
  • ಹಳೇ ತಿರುಮಕೂಡಲಿನಲ್ಲಿ
ತಿ.ನರಸೀಪುರ; ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಕೈಲಾಸಾಶ್ರಮ ಮಹಾಸಂಸ್ಥಾನ ಟ್ರಸ್ಟ್ ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಇದ್ದ ನಿವೇಶನದ ತಕರಾರು ಬಗೆಹರಿದ ಹಿನ್ನೆಲೆಯಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನೂತನ ಮನೆಗಳನ್ನು ಉದ್ಘಾಟಿಸಿ ಅಧಿಕೃತವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಹಳೇ ತಿರುಮಕೂಡಲಿನ ಕೆಲವು ನಿವಾಸಿಗಳು ಪ್ರವೇಶ ದ್ವಾರದಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿದ್ದರು. ಕೈಲಾಸಾಶ್ರಮಕ್ಕೆ ಸೇರಿದ ನಿವೇಶನವಾಗಿದ್ದರಿಂದ ಗೊಂದಲ ಉಂಟಾಗಿ, ನಿವಾಸಿಗಳು ಹಾಗೂ ಕೈಲಾಸಾಶ್ರಮದ ನಡುವೆ ತಕರಾರು ನಡೆಯುತ್ತಿತ್ತು. ಪುರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಆರ್.ಚೇತನ್ ಹಲವಾರು ವರ್ಷಗಳಿಂದ ಸಮಸ್ಯೆ ಪರಿಹರಿಸಲು ಮಧ್ಯಸ್ಥಿಕೆ ವಹಿಸಿ ಇತ್ಯರ್ಥಕ್ಕೆ ಪ್ರಯತ್ನಿಸಿದ್ದರು. ಅಂತಿಮವಾಗಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರ ಕಂಡಿದೆ. ಜಾಗದ ತಕರಾರು ಸುಖಾಂತ್ಯಗೊಂಡಿರುವುದು ಖುಷಿ ತಂದಿದೆ. ಇದೊಂದು ಮಾದರಿ ಪ್ರಯತ್ನವಾಗಿದೆ. ಚೇತನ್ ಅವರು ಸಮಸ್ಯೆ ಬಗೆಹರಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದರು.
ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಹಿರಿಯ ಮುಖಂಡ ಪಿ.ಸ್ವಾಮಿನಾಥ್‌ಗೌಡ, ಪುರಸಭೆ ಮಾಜಿ ಸದಸ್ಯ ಆರ್.ಚೇತನ್, ಜಿಪಂ ಮಾಜಿ ಸದಸ್ಯ ಕೆ.ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತ್‌ಬಾಬು, ಮುಖಂಡರಾದ ಸೋಮಣ್ಣ, ಸಂದೇಶ ಗೌಡ, ಮುದ್ದು ಬೀರನಹುಂಡಿ ಶ್ರೀಕಂಠ, ಕೆ.ಗಣೇಶ್, ರಜಿನಿ, ಪಿ.ಬಿ.ಸುರೇಶ್, ಮಂಜುನಾಥ್, ಗುರುಮಲ್ಲು, ಮಂಜು, ಎ.ಜೆ.ವೆಂಕಟೇಶ್, ಸಿ.ಚಂಚಲಾ ನಾಗರಾಜು ಇತರರು ಇದ್ದರು.