ಮೈಸೂರಿನಿಂದ ಲಂಡನ್ ವರೆಗೆ ಬೈಕ್ ಯಾತ್ರೆ ಕೈಗೊಂಡಿರುವ ನಾಗಾರ್ಜುನ ಅನಂತ ಭಗವಾನ್ ಅವರ ಪ್ರಯಾಣಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಿಶಾನೆ ತೋರಿದರು. ನಾಗಾರ್ಜುನ ಅವರ ಕುಟುಂಬ ವರ್ಗದವರು ಇದ್ದರು. 
ಮೈಸೂರು

ಮೈಸೂರಿನಿಂದ ಲಂಡನ್ ಯಾತ್ರೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ನಿಶಾನೆ

ಪ್ರಮುಖ ಮುಖ್ಯಾಂಶಗಳು

  • ಈ ಯಾತ್ರೆ ಕೇವಲ ಬೈಕ್ ಸವಾರಿ ಅಲ್ಲ. ಇದು ಜನರನ್ನು, ಸಂಸ್ಕೃತಿಗಳನ್ನು ಮತ್ತು ಸ್ನೇಹವನ್ನು ಸಂಪರ್ಕಿಸುವ ಪ್ರಯತ್ನ
  • ಯುವಕರಿಗೆ ಗಡಿಗಳನ್ನು ಮೀರಿ ಕನಸು ಕಾಣಲು ಪ್ರೇರಣೆ ನೀಡುವುದು ಇದರ ಉದ್ದೇಶ
ಮೈಸೂರು:ಮೈಸೂರಿನಿಂದ ಲಂಡನ್‌ಗೆ ಸುಮಾರು 20 ಸಾವಿರ ಕಿ.ಮೀ. ಸಾಹಸ ಯಾತ್ರೆ ಕೈಗೊಂಡಿರುವ ನಗರದ ಉದ್ಯಮಿ ನಾಗಾರ್ಜುನ ಅನಂತ ಭಗವಾನ್ ಅವರ ಪ್ರಯಾಣಕ್ಕೆ ಭಾನುವಾರ ಹಸಿರು ನಿಶಾನೆ ತೋರಲಾಯಿತು.
ನಗರದ ಅರಮನೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕೃತ ಚಾಲನೆ ನೀಡಿ ಶುಭ ಕೋರಿದರು.
ಯಾತ್ರಾರ್ಥಿ ನಾಗಾರ್ಜುನ ಅನಂತ ಭಗವಾನ್ ಮಾತನಾಡಿ, ಈ ಯಾತ್ರೆ ಕೇವಲ ಬೈಕ್ ಸವಾರಿ ಅಲ್ಲ. ಇದು ಜನರನ್ನು, ಸಂಸ್ಕೃತಿಗಳನ್ನು ಮತ್ತು ಸ್ನೇಹವನ್ನು ಸಂಪರ್ಕಿಸುವ ಪ್ರಯತ್ನ. ಯುವಕರಿಗೆ ಗಡಿಗಳನ್ನು ಮೀರಿ ಕನಸು ಕಾಣಲು ಪ್ರೇರಣೆ ನೀಡುವುದು ಇದರ ಉದ್ದೇಶ ಎಂದು ಹೇಳಿದರು.
ಗಡಿಗಳನ್ನು ಮೀರಿ ಸ್ನೇಹ, ಸಂಸ್ಕೃತಿ ವಿನಿಮಯದ ಈ ಯಾತ್ರೆ, ಭಾರತ, ನೇಪಾಳ, ಚೀನಾ, ಕಜಕಿಸ್ತಾನ್, ರಷ್ಯಾ, ಯುರೋಪಿನ ಹಲವು ದೇಶಗಳನ್ನು ದಾಟಿ ಅಂತಿಮವಾಗಿ ಯುನೈಟೆಡ್ ಕಿಂಗ್‌ಡಮ್‌ನ ಲಂಡನ್ ನಗರವನ್ನು ತಲುಪಲಿದೆ. ಒಟ್ಟು 60 ದಿನಗಳಿಗೂ ಹೆಚ್ಚಿನ ದಿನಗಳಲ್ಲಿ ಸಾಗಲಾಗುವುದು ಎಂದು ಹೇಳಿದರು.