- 24ನೇ ಯತಿ ಶ್ರೀ ಗುಣನಿಧಿ ತೀರ್ಥರ ಆರಾಧನಾ ಮಹೋತ್ಸವ
ತಿ.ನರಸೀಪುರ: ದಾಸ ಸಾಹಿತ್ಯದ ಆದ್ಯ ಪ್ರವರ್ತಕರೂ ಆಗಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಮುಳಬಾಗಿಲು ಶ್ರೀ ಪಾದರಾಜರ ಮಠದ ಪರಂಪರೆಯ 24ನೇ ಯತಿ ಶ್ರೀ ಗುಣನಿಧಿ ತೀರ್ಥರ ಆರಾಧನಾ ಮಹೋತ್ಸವ ಫೆ.8ರಂದು ( ಮಾಘ ಬಹುಳ ಸಪ್ತಮಿ) ನೆರವೇರಲಿದೆ.
ತಾಲೂಕಿನ ತಾಯೂರು ಗ್ರಾಮದ ಕಪಿಲಾ ನದಿ ತೀರದಲ್ಲಿರುವ ಶ್ರೀಗಳ ಮೂಲ ವೃಂದಾವನ ಸನ್ನಿಧಾನದಲ್ಲಿ ಅಂದು ಬೆಳಗ್ಗೆ 8ಕ್ಕೆ ಮೂಲ ವೃಂದಾವನಕ್ಕೆ ಅಭಿಷೇಕ, ಪಂಚಾಮೃತ, ವಿಶೇಷ ಅಲಂಕಾರ ಆಯೋಜನೆಗೊಂಡಿದೆ.
ಮುಳಬಾಗಿಲು ಶ್ರೀ ಪಾದರಾಜರ ಮಹಾ ಸಂಸ್ಥಾನ ಮಠದ ಹಾಲಿ ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥರ ಸಾನ್ನಿಧ್ಯದಲ್ಲಿ ಬೆಳಗ್ಗೆ 10ಕ್ಕೆ ಸಂಸ್ಥಾನ ಪೂಜೆ ನಡೆಯಲಿದೆ. ನಂತರ ಪಂಡಿತರಿಂದ ಪ್ರವಚನ, ಭಜನೆ, ಅಲಂಕಾರ ಪಂಕ್ತಿ, ತೀರ್ಥ ಪ್ರಸಾದ ವಿತರಣೆ ನೆರವೇರಲಿವೆ. ತಾಯೂರು ವಂಶಸ್ಥರಾದ ಟಿ.ಎನ್. ಮಾಧವ ಮೂರ್ತಿ, ವೇಣುಗೋಪಾಲ ಮತ್ತು ರಂಗನಾಥ ಅವರು ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಳ್ಳಲಿವೆ. ಇದೇ ಸಂದರ್ಭ ಗ್ರಾಮದಲ್ಲಿರುವ ಗೋಪಾಲಕೃಷ್ಣ ದೇವರು, ಜನಮೇಜಯ ಪ್ರತಿಷ್ಠಿತ ಪ್ರಾಣದೇವರು, ಶ್ರೀಪಾದರಾಜರ ಮೃತ್ತಿಕಾ ವೃಂದಾವನಗಳಿಗೂ ವಿಶೇಷ ಪೂಜೆ ನಡೆಯಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.