ಡಾ. ಸತೀಶ್ ರಾವ್ 
ಮೈಸೂರು

ವಿಶ್ವ ಜೀರ್ಣಾಂಗ ಆರೋಗ್ಯ ದಿನ: ದೀರ್ಘಕಾಲದ ಭೇದಿಯನ್ನು ನಿರ್ಲಕ್ಷಿಸಬೇಡಿ

ಹೆಚ್ಚಿನಜನರು ಜೀವನದಲ್ಲಿ ಯಾವುದಾದರೊಂದುಸಮಯದಲ್ಲಿ ಭೇದಿಯನ್ನು ಅನುಭವಿಸಿರುತ್ತಾರೆ- ಸಾಮಾನ್ಯವಾಗಿ ಕಲುಷಿತಆಹಾರ ಸೇವನೆಯಿಂದ ಅಥವಾ ಹೊಟ್ಟೆಯಸೋಂಕಿನಿಂದ ಇದು ಉಂಟಾಗುತ್ತದೆ.ಹೆಚ್ಚಿನ ಸಂದರ್ಭಗಳಲ್ಲಿ,ಇದು ಕೆಲವು ದಿನಗಳಲ್ಲಿಗುಣವಾಗುತ್ತದೆ. ಆದರೆವಾರಗಟ್ಟಲೆ ಭೇದಿ ಮುಂದುವರಿದರೆ,ಅದನ್ನು ನಿರ್ಲಕ್ಷಿಸಬಾರದು.ದೀರ್ಘಕಾಲದ ಭೇದಿಯುಪೋಷಕಾಂಶದ ಕೊರತೆ, ಸುಸ್ತು,ಕೆಲಸದ ಸಾಮರ್ಥ್ಯ ಮತ್ತುಜೀವನದ ಗುಣಮಟ್ಟದ ಮೇಲೆ ಪರಿಣಾಮಬೀರಬಹುದು. ಮುಖ್ಯವಾಗಿ,ಇದು ವೈದ್ಯಕೀಯ ಚಿಕಿತ್ಸೆಅಗತ್ಯವಿರುವ ಗಂಭೀರ ಕಾಯಿಲೆಯಲಕ್ಷಣವೂ ಆಗಿರಬಹುದು.

ದೀರ್ಘಕಾಲದಭೇದಿ ಎಂದರೇನು?

ಭೇದಿಯುನಾಲ್ಕು ವಾರಗಳಿಗಿಂತ ಹೆಚ್ಚುಕಾಲ ಮುಂದುವರಿದರೆ ಅದನ್ನು"ದೀರ್ಘಕಾಲದಭೇದಿ" (Chronic Diarrhoea) ಎಂದುಕರೆಯಲಾಗುತ್ತದೆ. ಕೆಲವರಿಗೆದಿನಕ್ಕೆ ಹಲವಾರು ಬಾರಿ ಮಲವಿಸರ್ಜನೆಆಗಬಹುದು, ಇನ್ನುಕೆಲವರಿಗೆ ಹೊಟ್ಟೆ ನೋವು,ಹೊಟ್ಟೆ ಉಬ್ಬರ ಅಥವಾತೂಕ ಇಳಿಕೆಯಂತಹ ಸಮಸ್ಯೆಗಳುಕಾಣಿಸಿಕೊಳ್ಳಬಹುದು.

ಸಾಮಾನ್ಯಕಾರಣಗಳು

ದೀರ್ಘಕಾಲದಭೇದಿಗೆ ಸಾಮಾನ್ಯ ಆಹಾರದ ಅಲರ್ಜಿಯಿಂದಹಿಡಿದು ಗಂಭೀರ ಕರುಳಿನ ಕಾಯಿಲೆಗಳವರೆಗೆಹಲವು ಕಾರಣಗಳಿರಬಹುದು.

  1. ಇರಿಟೇಬಲ್ ಬೋವಲ್ ಸಿಂಡ್ರೋಮ್ (IBS): ಇದು ಮಾನಸಿಕ ಒತ್ತಡ, ಆತಂಕ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದ ಉಂಟಾಗುತ್ತದೆ.

  2. ಆಹಾರದ ಅಲರ್ಜಿ: ಕೆಲವರಿಗೆ ಹಾಲು (ಲ್ಯಾಕ್ಟೋಸ್) ಅಥವಾ ಗೋಧಿಯಲ್ಲಿರುವ ಪ್ರೋಟೀನ್ (ಗ್ಲುಟನ್) ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

  3. ಸೋಂಕುಗಳು: ಕಲುಷಿತ ನೀರು ಮತ್ತು ಆಹಾರದಿಂದ ಉಂಟಾಗುವ ಪರಾವಲಂಬಿ ಜೀವಿಗಳ ಸೋಂಕು ವಾರಗಟ್ಟಲೆ ಇರಬಹುದು.

  4. ಕರುಳಿನ ಉರಿಯೂತ (IBD): ಕರುಳಿನಲ್ಲಿ ಹಣ್ಣು ಅಥವಾ ಉರಿಯೂತ ಉಂಟಾದಾಗ ಮಲದಲ್ಲಿ ರಕ್ತ ಕಾಣಿಸಿಕೊಳ್ಳಬಹುದು.

  5. ಪೋಷಕಾಂಶ ಹೀರಿಕೊಳ್ಳುವಲ್ಲಿ ತೊಂದರೆ: ಮೇದೋಜೀರಕ ಗ್ರಂಥಿ ಅಥವಾ ಯಕೃತ್ತಿನ ಸಮಸ್ಯೆ ಇದ್ದಾಗ ದೇಹವು ಆಹಾರವನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ.

  6. ಮಾತ್ರೆಗಳ ಅಡ್ಡಪರಿಣಾಮ: ಕೆಲವು ಆಂಟಿಬಯೋಟಿಕ್ಸ್ ಅಥವಾ ಸಕ್ಕರೆ ಕಾಯಿಲೆಯ ಮಾತ್ರೆಗಳಿಂದಲೂ ಭೇದಿ ಆಗಬಹುದು.

  7. ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಗ್ರಂಥಿ ಅತಿಯಾಗಿ ಕೆಲಸ ಮಾಡಿದಾಗ ಮಲವಿಸರ್ಜನೆಯ ಸಂಖ್ಯೆ ಹೆಚ್ಚಾಗಬಹುದು.

ನಿರ್ಲಕ್ಷಿಸಬಾರದಎಚ್ಚರಿಕೆ ಲಕ್ಷಣಗಳು

ಕೆಳಗಿನಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೈದ್ಯರನ್ನು ಸಂಪರ್ಕಿಸಿ:

  • ಮಲದಲ್ಲಿ ರಕ್ತ ಬೀಳುವುದು

  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು

  • ಜ್ವರ ಮತ್ತು ತೀವ್ರ ಹೊಟ್ಟೆ ನೋವು

  • ಸತತ ವಾಂತಿ ಮತ್ತು ರಕ್ತಹೀನತೆ

  • ರಾತ್ರಿ ನಿದ್ರೆಯಲ್ಲೂ ಭೇದಿಯಾಗುವುದು

  • ಸಮಸ್ಯೆ 4 ವಾರಗಳಿಗಿಂತ ಹೆಚ್ಚು ಕಾಲ ಇರುವುದು

ಪರೀಕ್ಷೆಗಳುಹೇಗೆ ಮಾಡಲಾಗುತ್ತದೆ?

ವೈದ್ಯರುಕೆಲವು ಪರೀಕ್ಷೆಗಳನ್ನು ಸಲಹೆಮಾಡಬಹುದು:

  • ರಕ್ತ ಪರೀಕ್ಷೆ

  • ಮಲ ಪರೀಕ್ಷೆ

  • ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕ್ಯಾನ್

  • ಕೊಲೊನೋಸ್ಕೋಪಿ

  • ಎಂಡೋಸ್ಕೋಪಿ

ಇವುಗಳಿಂದಕಾರಣವನ್ನು ಖಚಿತಪಡಿಸಬಹುದು.

ಆಹಾರದಲ್ಲಿಬದಲಾವಣೆ

  • ಕುದಿಸಿದ ನೀರು ಸೇವಿಸಬೇಕು

  • ಸ್ವಚ್ಛ ಮತ್ತು ತಾಜಾ ಆಹಾರ ಸೇವನೆ

  • ಹೆಚ್ಚು ಎಣ್ಣೆ, ಮಸಾಲೆ ಮತ್ತು ಹೊರಗಿನ ಆಹಾರ ಕಡಿಮೆ ಮಾಡುವುದು

ಔಷಧಿಗಳು

  • ದೀರ್ಘಕಾಲದ ಅತಿಸಾರವು ಕೆಲವು ಸೋಂಕುಗಳು, ಪರೋಪಜೀವಿಗಳು (Parasites)ಗಳಿಂದ ಅಥವಾ ಅಶುದ್ಧ ಆಹಾರ ಮತ್ತು ನೀರಿನ ಬಳಕೆಯಿಂದ ಉಂಟಾಗಬಹುದು. ಚಿಕಿತ್ಸೆಯಲ್ಲಿ ಕಾರಣವಾದ ಸೋಂಕಿನ ಪ್ರಕಾರ ಆಂಟಿಬಯೋಟಿಕ್ ಅಥವಾ ಆಂಟಿಪ್ಯಾರಾಸಿಟಿಕ್ ಔಷಧಿಗಳನ್ನು ನೀಡಲಾಗುತ್ತದೆ ಹಾಗೂ ದೇಹದ ನೀರಿನ ಸಮತೋಲನ ಕಾಪಾಡಲಾಗುತ್ತದೆ. ಸ್ವಚ್ಛ ಆಹಾರ, ಸುರಕ್ಷಿತ ಕುಡಿಯುವ ನೀರು ಮತ್ತು ಸರಿಯಾದ ಪೌಷ್ಟಿಕ ಆಹಾರ ಸೇವನೆ ಚೇತರಿಕೆಗೆ ಸಹಾಯಕವಾಗುತ್ತದೆ.

  • IBS (Irritable Bowel Syndrome) ಚಿಕಿತ್ಸೆಯಲ್ಲಿ ಮುಖ್ಯವಾಗಿ ಆಹಾರ ನಿಯಂತ್ರಣ, ಜೀವನಶೈಲಿ ಬದಲಾವಣೆ ಮತ್ತು ಒತ್ತಡ ನಿರ್ವಹಣೆ ಒಳಗೊಂಡಿರುತ್ತವೆ. ರೋಗಿಯ ಲಕ್ಷಣಗಳಿಗೆ ಅನುಗುಣವಾಗಿ ಹೊಟ್ಟೆನೋವು, ಮಲಬದ್ಧತೆ ಅಥವಾ ಅತಿಸಾರ ಕಡಿಮೆ ಮಾಡಲು ಔಷಧಿಗಳನ್ನು ನೀಡಲಾಗುತ್ತದೆ.
    ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಆರೋಗ್ಯಕರ ಆಹಾರ ಪದ್ಧತಿ IBS ನಿಯಂತ್ರಣಕ್ಕೆ ಸಹಾಯಕವಾಗುತ್ತದೆ.

  • ಕರುಳಿನ ಉರಿಯೂತದ ಕಾಯಿಲೆಗಳಿಗೆ (IBD - ಕ್ರೋನ್ಸ್ ರೋಗ ಮತ್ತು ಅಲ್ಸರೇಟಿವ್ ಕೊಲೈಟಿಸ್) ದೀರ್ಘಕಾಲದ ವಿಶೇಷ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಚಿಕಿತ್ಸೆಯು ಉರಿಯೂತ ಕಡಿಮೆ ಮಾಡುವ ಔಷಧಿಗಳು, ಆಹಾರ ನಿಯಂತ್ರಣ, ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಹಾಗೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರಬಹುದು. ಮುಖ್ಯವಾಗಿ, ಜೈವಿಕ ಚಿಕಿತ್ಸೆ (Biologics) ಮತ್ತು ಇಮ್ಯುನೊಸಪ್ರೆಸೆಂಟ್ಸ್ ಎಂಬ ವಿಶೇಷ ಔಷಧಿಗಳ ಮೂಲಕ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸಲಾಗುತ್ತದೆ.

ಮನೆಮದ್ದುಸಾಕೇ?

ಬಹಳಜನ “ಇದು ಸಾಮಾನ್ಯ” ಎಂದುಮನೆಮದ್ದಿನಲ್ಲೇ ಕಾಲಹರಣಮಾಡುತ್ತಾರೆ. ಆದರೆದೀರ್ಘಕಾಲದ ಭೇದಿಯನ್ನು ನಿರ್ಲಕ್ಷ್ಯಮಾಡಿದರೆ ರಕ್ತಹೀನತೆ, ಪೋಷಕಾಂಶಕೊರತೆ ಮತ್ತು ಗಂಭೀರ ಕಾಯಿಲೆಗಳಸಾಧ್ಯತೆ ಇದೆ.

ತಡೆಯುವವಿಧಾನಗಳು

  • ಕೈ ತೊಳೆಯುವ ಅಭ್ಯಾಸ

  • ಶುದ್ಧ ನೀರು ಕುಡಿಯುವುದು

  • ಹಳೆಯ ಅಥವಾ ಬೀದಿ ಆಹಾರ ಕಡಿಮೆ ಮಾಡುವುದು

  • ಒತ್ತಡ ಕಡಿಮೆ ಮಾಡುವುದು

  • ನಿಯಮಿತ ವ್ಯಾಯಾಮ

  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು

"

ದೀರ್ಘಕಾಲದ ಜಲಬಾಧೆ ಅಥವಾ ಭೇದಿ ಒಂದು ಸಾಮಾನ್ಯ ಸಮಸ್ಯೆಯಂತೆ ಕಾಣಬಹುದು. ಆದರೆ ಅದು ದೇಹದ ಒಳಗಿನ ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು. ಸಮಯಕ್ಕೆ ಸರಿಯಾಗಿ ತಜ್ಞರನ್ನು ಸಂಪರ್ಕಿಸಿ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.

— ಡಾ. ಸತೀಶ್ ರಾವ್ ಎ.ಕೆ. ಹಿರಿಯ ಜೀರ್ಣಾಂಗ ತಜ್ಞರು ಮಣಿಪಾಲ್ ಆಸ್ಪತ್ರೆ ಮೈಸೂರು ಕಾರ್ಯದರ್ಶಿ, ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿ ಅಸೋಸಿಯೇಷನ್