ಚಾಮರಾಜಪುರಂ ಜನನಿ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು.ಕೆರೋಡಿ ಎಂ. ಲೋಲಾಕ್ಷಿ, ಸಿ. ಗೌರಿ ಕೆ.ಹರೀಶ್‌ಗೌಡ, ನಿರ್ಮಲ ಶ್ರೀನಿವಾಸ್, ಕೆ.ಆರ್. ವಿಭಾ ಇನ್ನಿತರರಿದ್ದರು 
ಮೈಸೂರು

ಪುರುಷರ ಬೆಂಬಲವಿಲ್ಲದೆ ಮಹಿಳೆ ಸಾಧನೆ ಸಾಧ್ಯವಿಲ್ಲ

ಪ್ರಮುಖ ಮುಖ್ಯಾಂಶಗಳು

  • ಕವಯಿತ್ರಿ ಕೆರೋಡಿ ಎಂ. ಲೋಲಾಕ್ಷಿ ಅಭಿಪ್ರಾಯ
  • ಸಾಧಕರಿಗೆ ಪ್ರಶಸ್ತಿ ಪ್ರದಾನ
ಮೈಸೂರು: ಪುರುಷರ ಬೆಂಬಲವಿಲ್ಲದೆ ಮಹಿಳೆ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಡುವ ಪುರುಷರನ್ನೂ ಗೌರವಿಸಬೇಕು ಎಂದು ಕವಯಿತ್ರಿ ಕೆರೋಡಿ ಎಂ. ಲೋಲಾಕ್ಷಿ ಹೇಳಿದರು.
ಚಾಮರಾಜಪುರಂ ಜನನಿ ಸೇವಾ ಟ್ರಸ್ಟ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಾಲಿಕೆ ಮಾಜಿ ಸದಸ್ಯೆ ಕೆ.ಕಮಲಮ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಮಾತನಾಡಿದರು. 
ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯವೂ ಆಚರಿಸುವಂತದ್ದಾಗಿರಬೇಕು ಎಂದರು.
ಪ್ರಶಸ್ತಿಗಳು ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ಕೊಡುತ್ತದೆ. ಸಾಧನೆಗೆ ಎಂದಿಗೂ ಅಂತ್ಯವಿಲ್ಲ. ಮಹಿಳೆ ತನ್ನ ಉದರದಲ್ಲಿ 9 ತಿಂಗಳು ಮಗುವನ್ನು ಹೊರುತ್ತಾಳೆ. 
ನಂತರ 2-3 ವರ್ಷ ಕಂಕುಳಲ್ಲಿ ಹೊತ್ತು ತಿರುಗುತ್ತಾಳೆ. ಬಳಿಕ ಆ ಮಗುವಿನ ಬಗ್ಗೆಯೇ ಸದಾ ಚಿಂತಿಸುತ್ತಾಳೆ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲೂ ಮಹಿಳೆ ಇರುತ್ತಾಳೆ ಎಂದರು.
ವಿವಿಧ ಕ್ಷೇತ್ರ ಸಾಧಕರಾದ ಎಂ.ಎಸ್.ಸುಜಾತಾ, ಡಿ.ಪುಷ್ಪ್ಪಾ,  ಪವಿತ್ರಾ, ಡಾ.ಚಿತ್ಕಲಾ ಅರುಣ್, ರಶ್ಮಿ ಚಿಕ್ಕಮಗಳೂರು, ತನುಜಾ ಮಹೇಶ್, ಡಾ.ಸಿರೀಶ್ ಎಸ್.ಕುಮಾರ್, ಕವಿತಾ ಶೆಟ್ಟಿ, ಲತಾ, ಜಯಂತಿ, ಭಾನುಮತಿ, ಕಮಲಾ ಆನಂದ್, ಜೆ.ಎಂ.ಹರ್ಷಿತಾ ಸೇರಿದಂತೆ 16 ಸಾಧಕಿಯರನ್ನು ಸನ್ಮಾನಿಸಲಾಯಿತು.
 ಸಿ ಗೌರಿ ಕೆ.ಹರೀಶ್‌ಗೌಡ, ನಿರ್ಮಲಾ ಶ್ರೀನಿವಾಸ್, ಕೆ.ಆರ್. ವಿಭಾ, ವಸು ದೀಪಕ್, ಸೌಮ್ಯಾ ಅಶೋಕ್, ಎಂ.ಕೆ.ಅಶೋಕ್ ಇನ್ನಿತರರಿದ್ದರು.