online 
ಮೈಸೂರು

ಮಹಿಳೆಗೆ ಆನ್ಲೈನ್ ವಂಚನೆ

ಅವಿನಾಶ್ ಜೈನಹಳ್ಳಿ
ಆನ್‌ಲೈನ್ ವಂಚನೆಗೆ ಒಳಗಾಗಿರುವ ರಾಘವೇಂದ್ರ ನಗರದ ಮಹಿಳೆಯೊಬ್ಬರು 26.9 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಾಟ್ಸ್ ಆಪ್‌ಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಂಬಂಧ ಬಂದ ಸಂದೇಶ ಬಂದಿದೆ. ಹೆಚ್ಚಿನ ಲಾಭಗಳಿಸಬಹುದು ಎಂದು ಗ್ರೂಪಿನಲ್ಲಿ ಬಂದ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದ್ದು, ಆತ ನೀಡಿದ ಸೂಚನೆಯಂತೆ ಹಂತ ಹಂತವಾಗಿ ಹಣವನ್ನು ಅವರು ಹೇಳಿದ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ಬಳಿಕ ಹಣ ವಾಪಸ್ ಬಾರದೇ ಇದ್ದಾಗ ವಂಚನೆಗೊಳಾಗಿರುವುದು ಗೊತ್ತಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.