ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್‌ಟಿಟ್ಯೂಟ್ ಾರ್ ಮ್ಯಾನೇಜ್‌ಮೆಂಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಛಾಯನ್ ಗುಪ್ತ, ಅಶ್ವಿನಿ ತಮ್ಮಯ್ಯ, ಡಾ.ಮೊಹಮ್ಮದ್ ಮಿನ್ನಾಜ್ ಇತರರಿದ್ದರು. 
ಮೈಸೂರು

ಭಾರತೀಯ ಬ್ಯಾಂಕಿಂಗ್‌ನ ಡಿಜಿಟಲ್ ಸ್ಥಿತ್ಯಂತರಕ್ಕೆ ಸಾಕ್ಷಿ

ಮೈಸೂರು: ಈಗ ಹೆಚ್ಚಿನ ಬ್ಯಾಂಕಿಂಗ್ ವಹಿವಾಟುಗಳು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುವ ಸನ್ನಿವೇಶ ಕಡಿಮೆಯಾಗಿವೆ. ಭಾರತೀಯ ಬ್ಯಾಂಕಿಂಗ್ ಪ್ರಸ್ತುತ ಗಮನಾರ್ಹವಾದ ಡಿಜಿಟಲ್ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿ ನಿಂತಿದೆ ಎಂದು ಅವಿವಾ ಇಂಡಿಯಾದ ಬ್ಯಾಂಕ್ ಅಶ್ಯೂರೆನ್ಸ್ ನ್ಯಾಷನಲ್ ಹೆಡ್ ಛಾಯನ್ ಗುಪ್ತ ತಿಳಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್‌ಟಿಟ್ಯೂಟ್ ಾರ್ ಮ್ಯಾನೇಜ್‌ಮೆಂಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಟೆಕ್ನಾಲಜಿ ಆ್ಯಂಡ್ ಟ್ರಾನ್ಸ್‌ರ್ಮೇಷನ್ ಇನ್ ಮಾರ್ಕೆಟಿಂಗ್: ಆಡ್ಯಾನ್ಸಿಂಗ್ ವರ್ವಸ್, ರ್ಪಾರ್ಮನ್ಸ್ ಆ್ಯಂಡ್ ಪರ್ಸನಲೈಸೇಷನ್ ಾರ್ ಇಂಪ್ಯಾಕ್ಟ್’ ಕುರಿತಂತೆ ಒಂದು ದಿನದ ಅಂತಾರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಪ್ರಧಾನ ದಿಕ್ಕೂಚಿ ಭಾಷಣವನ್ನು ಮಾಡಿದರು.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡಿಜಿಟಲ್ ಮಾಧ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ. ದೇಶದಲ್ಲಿ ನಿತ್ಯವೂ ಏಳು ಲಕ್ಷದಷ್ಟು ಡಿಜಿಟಲ್ ಟ್ರಾನ್ಸಾಕ್ಷನ್ ನಡೆಯುತ್ತಿವೆ. ಆದರೆ ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಕಡಿಮೆಯಾಗಿದೆ ಎಂದರು.
ಗ್ರಾಹಕರ ಅಗತ್ಯಗಳು, ನಿರೀಕ್ಷೆಗಳು, ನಿರಂತರವಾಗಿ ಬದಲಾಗುತ್ತವೆ. ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಂದು ಬಗೆಯ ಸವಾಲೊಡ್ಡಿದೆ. ಆದರೆ, ತಂತ್ರಜ್ಞಾನದ ಸಹಾಯದೊಂದಿಗೆ ಡೇಟಾ ಸೆಟ್‌ಗಳ ಆಧಾರದಲ್ಲಿ ಗ್ರಾಹಕರಿಗೆ ಪೂರಕ ಸೇವೆಗಳನ್ನು ನೀಡಲು ಸಾಧ್ಯವಿದೆ. ಇದಲ್ಲದೇ ಮಾಹಿತಿ ಕಳವು ಮತ್ತು ಡಿಜಿಟಲ್ ವಂಚನೆಗಳಂತಹ ವಿಷಯದ ಬಗೆಗೆ ಮಾಹಿತಿ ನೀಡಿದ ಗುಪ್ತಾ ಅವರು ಗ್ರಾಹಕರ ರಕ್ಷಣೆಗಾಗಿ ಬ್ಯಾಂಕ್‌ಗಳು ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು ಜನರೂ ಕೂಡ ಆರ್ಥಿಕ ಶಿಸ್ತು ಮತ್ತು ಅರಿವನ್ನು ಹೊಂದಬೇಕಿದೆ ಎಂದರು.
ಉದ್ಯಮಿ ಅಶ್ವಿನಿ ತಮ್ಮಯ್ಯ ಮಾರ್ಕೆಟಿಂಗ್ ಇನ್ ದಿ ಏಜ್ ಆ್ ಡಿಜಿಟಲ್ ಡಿಸಿಶನ್ ಕುರಿತಂತೆ ದಿಕ್ಕೂಚಿ ಭಾಷಣ ಮಾಡಿದರು. ಇಂದಿನ ಮಾರ್ಕೆಟಿಂಗ್ ಪರಿಣತರು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಪರಿಹಾರ ಒದಗಿಸಿಕೊಡುವಲ್ಲಿ ವಹಿಸುತ್ತಿರುವ ನಿರ್ಣಾಯಕ ಪಾತ್ರದ ಕುರಿತು ವಿವರಿಸಿದರು.
ವಿಚಾರಸಂಕಿರಣವನ್ನು ಉದ್ಘಾಟಿಸಿದ ಎಸ್‌ಡಿಎಂ ಐಎಂಡಿಯ ಶೈಕ್ಷಣಿಕ ವಿಭಾಗದ ಡೀನ್ ಡಾ.ಮೊಹಮ್ಮದ್ ಮಿನ್ನಾಜ್, ತಂತ್ರಜ್ಞಾನವು ನಾವು ಮಾಡುವ ಕೆಲಸದ ಸಾಮರ್ಥ್ಯ ಹೆಚ್ಚಿಸುತ್ತದೆ. ಆದರೆ ಈ ನಡುವೆ ಡೇಟಾ ಪ್ರೈವಸಿಯಂತಹ ವಿಷಯಗಳ ಬಗ್ಗೆ ಮಾರ್ಕೆಟಿಂಗ್ ಕ್ಷೇತ್ರದ ನಿಷ್ಣಾತರು ಸೂಕ್ಷ್ಮ ಗಮನಹರಿಸಬೇಕಿದೆ ಎಂದರು.
ಮಾರ್ಕೆಟಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೀತನನ್ ರಾಜ್, ಎಚ್‌ಡಿಎ್ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಗೋವಾ ವಿಭಾಗದ ವೈಸ್ ಪ್ರಸಿಡೆಂಟ್ ಗಗನ್ ರಂಕಾ, ಮಾರ್ಕೆಟಿಂಗ್ ಕ್ಷೇತ್ರದ ವಿಷಯ ತಜ್ಞರು, ಕ್ಷೇತ್ರ ಪರಿಣತರು. ಸಂಶೋಧನಾರ್ಥಿಗಳು, ಶಿಕ್ಷಣ ತಜ್ಞರು ಆ ವಿಚಾರ ಹಾಗೂ ವೃತ್ತಿಪರರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದು ಒಟ್ಟು 25 ರಿಸರ್ಚ್ ಪೇಪರ್‌ಗಳನ್ನು ಮಂಡಿಸಲಾಯಿತು.