ಶಾಸಕ ತನ್ವೀರ್ ಸೇಠ್  
ಮೈಸೂರು

ವೈಟ್ ಟಾಪಿಂಗ್ ಕಾಮಗಾರಿ ಆರಂಭ

ನಗರದ ಮಣಿಪಾಲ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ 2.2ಕಿ.ಮೀ. ಉದ್ದದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎನ್.ಆರ್.ಕ್ಷೇತ್ರದ ವ್ಯಾಪ್ತಿಂು ಮೂರು ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್ ವಾಡಲಾಗುತ್ತಿದ್ದು, ಅದರ ಭಾಗವಾಗಿ ಮಣಿಪಾಲ್ ವೃತ್ತದಿಂದ ಮಿಲಿನಿಂುಂ ವೃತ್ತದವರೆಗೆ ರಸ್ತೆಂು ಕಾಮಗಾರಿಗೆ ಚಾಲನೆ ನೀಡಲಾಗಿದೆ. ವೈಟ್‌ಟಾಪಿಂಗ್ ಂೋಜನೆಂುಲ್ಲಿ ಕಾಂಕ್ರೀಟ್ ಕ್ಯಾರೇಜ್ ವೇ, ಭವಿಷ್ಯದಲ್ಲಿ ಒಳಚರಂಡಿ, ನೀರು ಸರಬರಾಜು ಹಾಗೂ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಲು ಅನುಕೂಲವಾಗುವಂತೆ ರಸ್ತೆ ಬದಿಂುಲ್ಲಿ ಪೇವರ್ ಬ್ಲಾಕ್‌ಗಳನ್ನು ಅಳವಡಿಸಿ ಬರ್ ಜೋನ್ ನಿರ್ಮಿಸಲಾಗುತ್ತದೆ. ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ುಟ್‌ಪಾತ್ ಅಭಿವೃದ್ಧಿ, ಮಳೆ ನೀರು ಸರಾಗವಾಗಿ ಹರಿಂುಲು ಆರ್‌ಸಿಸಿ ಚರಂಡಿ, ರಸ್ತೆ ವಿಭಜಕಗಳಲ್ಲಿ ಪಾರಂಪರಿಕ ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗುತ್ತದೆ. ಇದಲ್ಲದೆ, ರಸ್ತೆಂುಲ್ಲಿರುವ ಹಾಲಿ ನೀರು ಸರಬರಾಜು ವ್ಯವಸ್ಥೆ ಹಾಗೂ ಒಳಚರಂಡಿ ಕೊಳವೆ ವಾರ್ಗಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸ್ಥಳಾಂತರಿಸುವ ಕಾಮಗಾರಿ ಂೋಜನೆಂು ಭಾಗವಾಗಿದೆ ಎಂದು ವಿವರಿಸಿದರು.
ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಂುದ್ ಎಕ್ಬಾಲ್, ಕೆಪಿಸಿಸಿ ಸಂಂೋಜಕ ಶೌಕತ್ ಅಲಿಖಾನ್, ಮಜೀದ್ ಅಹಮದ್, ನಬಿಜಾನ್, ಮುಖಂಡರಾದ ನೂರ್ ಅಹಮದ್, ಅಬ್ದುಲ್ ವಸೀಂ, ರ್ಇಾನ್, ಸೈಂುದ್ ಾರೂಖ್, ಅ್ತಾಬ್ ಉ, ಅಕ್ಮಲ್, ಶಾಕಿರಾ ಬೇಗಂ, ಎನ್.ವಾದೇಗೌಡ, ಪ್ರದೀಪ್ ಚಂದ್ರ ಇದ್ದರು.