ಬೆಟ್ಟದಪುರದ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ ವೇಳೆ ಸಾರ್ವಜನಿಕರಿಂದ ಸಮಸ್ಯೆ ಬಗ್ಗೆ ಅಹವಾಲು ಸ್ವೀಕಾರ ಮಾಡಿದರು.
ಬೆಟ್ಟದಪುರ ಪೊಲೀಸ್ ಠಾಣೆಗೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಪೊಲೀಸ್ ಠಾಣೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಗುರುವಾರ ಭೇಟಿ ನೀಡಿದರು.
ಠಾಣೆಯ ವಿವಿಧ ದಾಖಲಾತಿಯ ನೋಂದಣಿ ಪುಸ್ತಕಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಈ ವೇಳೆ ಗ್ರಾಮದ ವಿವಿಧ ಮುಖಂಡರು, ಮಹಿಳಾ ಸದಸ್ಯರು ಸನ್ಮಾನಿಸಿದರು.
ದಿಢೀರ್ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹುಣಸೂರು ಡಿವೈಎಸ್ಪಿ ರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ, ಪಿಎಸ್‌ಐ ಅಜಯ್ ಕುಮಾರ್, ಸಿಡಿಪಿಒ ವೀಣಾ, ಎಎಸ್‌ಐ ಗೋಪಾಲ್, ಜಗದೀಶ್, ಮುಖಂಡರಾದ ಸರಸ್ಪತಿ, ಅನಿತಾ ತೊಟ್ಟಪ್ಪಶೆಟ್ಟಿ, ಪ್ರೀತಿ ಅರಸ್, ಪುಟ್ಟರಾಜು, ರವಿಕುಮಾರ್, ನೇರಳಕುಪ್ಪೆ ನವೀನ್ ಸೇರಿದಂತೆ ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಇದ್ದರು.