ಪಿರಿಯಾಪಟ್ಟಣ ತಾಲೂಕು ಕಣಗಾಲು ಗ್ರಾಮದ ಶ್ರೀ ದಿಡ್ಡಿಯಮ್ಮ ದೇವಸ್ಥಾನದ ಅರ್ಚಕರನ್ನು ಬದಲಿಸುವಂತೆ ಒತ್ತಾಯಿಸಿ ಮುಜರಾಯಿ ತಹಸೀಲ್ದಾರ್ ಭಾಗ್ಯಾ ಅವರಿಗೆ ಗ್ರಾಮಸ್ಥರು ಮೈಸೂರಿನಲ್ಲಿ ಮನವಿ ಸಲ್ಲಿಸಿದರು. ಕೆ.ವಿ ಶೇಖರ್, ಕೆ.ಮಹದೇವ್, ಕೆ.ಡಿ ಮಹದೇವ್, ವಾಸು, ತಮ್ಮೇಗೌಡ, ಬೇಲೂರಯ್ಯ, ಕುಮಾರಶೆಟ್ಟಿ ಇತರರು ಇದ್ದರು.
- ಗ್ರಾಮಸ್ಥರು ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತೆ ನಡೆದುಕೊಳ್ಳುತ್ತಿದ್ದಾರೆ
- ದಂಡಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿಯೂ ಅರ್ಚಕರ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿದ್ದರು
ಮೈಸೂರು:ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಗ್ರಾಮದೇವತೆ ಶ್ರೀ ದಿಡ್ಡಿಯಮ್ಮ ದೇವಸ್ಥಾನದ ಅರ್ಚಕರನ್ನು ಬದಲಿಸುವಂತೆ ಮುಜರಾಯಿ ಇಲಾಖೆ ತಹಸೀಲ್ದಾರ್ ಭಾಗ್ಯಾ ಅವರಿಗೆ ಗ್ರಾಮಸ್ಥರು ಮೈಸೂರು ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ದೇವಸ್ಥಾನದ ಪೂಜೆ ಮಾಡುವ ವಿಧಾನ, ವೈಯಕ್ತಿಕ ನಡವಳಿಕೆ ಗ್ರಾಮಸ್ಥರು ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಿದೆ. ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ಉಪವಿಭಾಗಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿಯೂ ಅರ್ಚಕರ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿದ್ದರು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗ್ರಾಮಸ್ಥರ ಮಾಹಿತಿಯಂತೆ ಅರ್ಚಕರ ಬದಲಾವಣೆ ಸಂಬಂಧ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಮಾಹಿತಿ ಕಳುಹಿಸಿಕೊಟ್ಟಿದ್ದರೂ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ. ಈ ನಿಟ್ಟಿನಲ್ಲಿ ಕ್ರಮ ಅಗತ್ಯ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮುಖಂಡರಾದ ಕೆ.ವಿ ಶೇಖರ್, ಕೆ.ಮಹದೇವ್, ಕೆ.ಡಿ. ಮಹದೇವ್, ವಾಸು, ತಮ್ಮೇ ಗೌಡ, ಬೇಲೂರಯ್ಯ, ಕುಮಾರಶೆಟ್ಟಿ, ಸ್ವಾಮಿಗೌಡ, ಕಾಳಯ್ಯ, ಗೋವಿಂದೇಗೌಡ, ಹರಿ, ಜಗದೀಶ್, ಮಧು, ಪ್ರಭಾಕರ, ರಾಜಶೇಖರ, ತಮ್ಮೇಗೌಡ ಇತರರು ಇದ್ದರು.