ಮೈಸೂರು ತಾಲೂಕಿನ ಸಿದ್ಧಲಿಂಗಪುರ ಗ್ರಾಮದಲ್ಲಿರುವ ವಿಜಯವಾಣಿ ಮುದ್ರಣಾಲಯ
- ಅಚ್ಚು ಮನೆ ಕಾರ್ಯ ಕಂಡು ಖುಷಿಪಟ್ಟ ಕುಕ್ಕರಹಳ್ಳಿ ಸರ್ಕಾರಿ ಶಾಲೆ ಮಕ್ಕಳು
- ‘ವಿದ್ಯಾರ್ಥಿ ಮಿತ್ರ’ ಪತ್ರಿಕೆಯ ಮುದ್ರಣ ಪ್ರಕ್ರಿಯೆ ವೀಕ್ಷಣೆ
ಮೈಸೂರು: ನಂಬರ್ 1 ಕನ್ನಡದ ದಿನಪತ್ರಿಕೆಯಾದ ‘ವಿಜಯವಾಣಿ’ಯ ಮುದ್ರಣಾಲಯಕ್ಕೆ ಕುಕ್ಕರಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಅಚ್ಚುಮನೆಯ ಕಾರ್ಯವೈಖರಿವನ್ನು ಕಣ್ತುಂಬಿಕೊಂಡರು.
ಶಾಲೆಯಿಂದ ವಿದ್ಯಾರ್ಥಿಗಳನ್ನು ವಿಆರ್‌ಎಲ್ ಸಂಸ್ಥೆಯ ಐಷಾರಾಮಿ ಬಸ್‌ನಲ್ಲಿ ಮೈಸೂರು ತಾಲೂಕಿನ ಸಿದ್ಧಲಿಂಗಪುರ ಗ್ರಾಮದಲ್ಲಿರುವ ಮುದ್ರಣಾಲಯಕ್ಕೆ ಕರೆದುಕೊಂಡು ಬರಲಾಯಿತು. ಇದೊಂದು ಪ್ರವಾಸ ಅನುಭವವನ್ನು ಈ ಮಕ್ಕಳಿಗೆ ತಂದುಕೊಟ್ಟಿತು.
40 ವಿದ್ಯಾರ್ಥಿಗಳು ಉತ್ಸಾಹದಿಂದ ಇಲ್ಲಿಗೆ ಪ್ರವೇಶಿಸಿದರು. ಇವರ ಭೇಟಿ ಸಂದರ್ಭದಲ್ಲಿ ನಡೆಯುತ್ತಿದ್ದ ವಿಜಯವಾಣಿಯ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆಯ ಮುದ್ರಣ ಪ್ರಕ್ರಿಯೆಯನ್ನು ಹತ್ತಿರದಿಂದ ವೀಕ್ಷಿಸಿದರು.
ಪತ್ರಿಕೆ ಮುದ್ರಣಕ್ಕೆ ಮುನ್ನ ನಡೆಯುವ ಪ್ಲೇಟ್ ತಯಾರಿಕೆ, ಕಲರ್ ಕಾಂಬಿನೇಷನ್... ಹೀಗೆ ವಿವಿಧ ಪೂರ್ವಸಿದ್ಧತೆಯ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲಿದ್ದ ಸಿಬ್ಬಂದಿ, ತಾಂತ್ರಿಕ ಪರಿಣಿತರು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಸಂಪಾದಕೀಯ ವಿಭಾಗದಿಂದ ಮುದ್ರಣಾಲಯಕ್ಕೆ ಕಳುಹಿಸಿಕೊಟ್ಟ ಪುಟವನ್ನು ವಿದ್ಯಾರ್ಥಿಗಳು ಕುತೂಹಲದಿಂದ ಗಮನಿಸಿದರು. ಬಹಳ ಆಸಕ್ತಿಯಿಂದ ವಿದ್ಯಾರ್ಥಿಗಳು ಸಣ್ಣಪುಟ್ಟ ಮಾಹಿತಿಯನ್ನೂ ಕೇಳಿ ಪಡೆದುಕೊಂಡರು. ಶರವೇಗದಲ್ಲಿ ನಡೆಯುತ್ತಿದ್ದ ನೂರಾರು ಪ್ರತಿಗಳ ಮುದ್ರಣವನ್ನು ಕೆಲ ವಿದ್ಯಾರ್ಥಿಗಳು ವಿಡಿಯೋ, ಫೋಟೋಗಳ ಮೂಲಕ ದಾಖಲಿಸಿಕೊಂಡರು.
ಇಲ್ಲಿಗೆ ಭೇಟಿ ನೀಡಿದ್ದು ಖುಷಿ ತಂದುಕೊಟ್ಟಿದೆ. ಶಾಲೆಯಿಂದಲೇ ಬಸ್‌ನಲ್ಲಿ ಕರೆದುಕೊಂಡು ಬಂದು ಇಲ್ಲಿಯ ಮುದ್ರಣ ವ್ಯವಸ್ಥೆಯನ್ನು ತೋರಿಸಿದರು. ಈ ಹಿಂದೆ ನಾನು ಪ್ರಿಂಟಿಂಗ್ ಪ್ರೆಸ್ ನೋಡಿರಲಿಲ್ಲ. ಹೀಗಾಗಿ, ಇದು ನನಗೆ ವಿಶೇಷ ಅನುಭವಕೊಟ್ಟಿದೆ. ಈ ಕ್ಷೇತ್ರದ ಹೊಸ ವಿಷಯ ತಿಳಿದುಕೊಳ್ಳಲು ಸಾಧ್ಯವಾಯಿತು.
ದಿನಪತ್ರಿಕೆ ರೂಪಿಸುವುದರ ಹಿಂದೆ ಬಹಳಷ್ಟು ಪರಿಶ್ರಮವಿದೆ ಎಂದು ನನಗೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ಬಳಿಕ ಪತ್ರಿಕೆಯನ್ನು ಹೊರತರುವುದು ಸವಾಲಿನ ಕೆಲಸವಾಗಿದೆ ಎಂಬುದು ಅರಿವಿಗೆ ಬಂದಿತು. ಇದು ಪತ್ರಿಕೆಯನ್ನು ಓದಲು ಇನ್ನಷ್ಟು ಆಸಕ್ತಿ ಮೂಡಿಸಿದೆ. ವಿಜಯವಾಣಿ ಉತ್ತಮವಾಗಿ ಮೂಡಿಬರುತ್ತಿದೆ. ನಿತ್ಯ ಅದನ್ನು ಓದಿ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದು, ನಮ್ಮ ಶಾಲೆಗೂ ಸಹ ವಿದ್ಯಾರ್ಥಿಮಿತ್ರ ಬರುತ್ತದೆ. ಇದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಕೆಗೆ, ಜ್ಞಾನ ವಿಸ್ತಾರಕ್ಕೂ ಸಹಕಾರಿಯಾಗಿದೆ.
ಜೀವನದಲ್ಲಿ ಒಮ್ಮೆಯೂ ಮುದ್ರಣಾಲಯ ನೋಡಿರಲಿಲ್ಲ. ಇಂದು ಅಂತಹ ಅವಕಾಶ ದೊರೆಯಿತು. ಇದರಿಂದ ಬಹಳ ಆನಂದವಾಗಿದೆ. ಜತೆಗೆ, ಪತ್ರಿಕೆ ಹೇಗೆ ಮುದ್ರಣವಾಗುತ್ತದೆ. ಈ ಸಂದರ್ಭದಲ್ಲಿ ಯಾವ ರೀತಿ ಬಣ್ಣ ಬಳಕೆ ಮಾಡುತ್ತಾರೆ. ಅದನ್ನು ಹೇಗೆ ಹೊಂದಾಣಿಕೆ ಮಾಡುತ್ತಾರೆ ಎಂಬುದು ತಿಳಿಯಿತು. ಈ ಭೇಟಿಯ ಅನುಭವ ಪತ್ರಿಕೆ ಓದಲು, ಕಲಿಕೆಗೆ ಇನ್ನಷ್ಟು ಉತ್ತೇಜನ ಕೊಟ್ಟಿದೆ.
ಈ ಭೇಟಿ ಹೊಸಲೋಕಕ್ಕೆ ಬಂದ ಅನುಭವ ಕೊಟ್ಟಿದೆ. ನಾನು ಮುದ್ರಣ, ಪತ್ರಿಕೆ ಕುರಿತು ಅಷ್ಟಾಗಿ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ಬಳಿಕ ಬಹಳಷ್ಟು ವಿಷಯಗಳು ಅರಿವಿಗೆ ಬಂದಿವೆ. ಪತ್ರಿಕೆಯ ಮುದ್ರಣ ಮುನ್ನ ಪೂರ್ವತಯಾರಿ, ಸಿದ್ಧಪಡಿಸುವಿಕೆ, ನಿರ್ವಹಣೆ ಹೇಗೆ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಜಯವಾಣಿ ಪತ್ರಿಕೆಯಲ್ಲಿ ಬರುವ ಕ್ರೀಡಾ, ಪ್ರಸ್ತಕ ಬೆಳವಣಿಗೆಗಳ ಕುರಿತು ಆಸಕ್ತಿಯಿಂದ ನಿತ್ಯ ಓದುತ್ತೇನೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಕೆಗೆ ವಿಜಯವಾಣಿ ಪತ್ರಿಕೆ ಓದು ಅನುಕೂಲಕರವಾಗಲಿದೆ.
ನಮ್ಮ ಶಾಲೆಯ ಬಹಳಷ್ಟು ವಿದ್ಯಾರ್ಥಿಗಳು ಪ್ರಿಂಟಿಂಗ್ ಪ್ರೆಸ್ ನೋಡಿರಲಿಲ್ಲ. ಅವರಿಗೆ ಮುದ್ರಣಾಲಯಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ‘ವಿಜಯವಾಣಿ’ಗೆ ಧನ್ಯವಾದಗಳು. ಇಲ್ಲಿಗೆ ಭೇಟಿ ನೀಡುವ ಮಕ್ಕಳಲ್ಲಿ ಹೊಸ ಕನಸು ಬಿತ್ತಲು ಸಹಕಾರಿಯಾಗಲಿದೆ. ಇದು ಅವರ ಭವಿಷ್ಯದಲ್ಲಿ ನವೋದ್ಯಮ ಸ್ಥಾಪನೆ, ಹೊಸ ಪ್ರಯತ್ನಕ್ಕೆ ಕನಸು ಕಾಣಲು ಪ್ರೇರಣೆಯನ್ನೂ ನೀಡುತ್ತದೆ.
ಪತ್ರಿಕೆಗಳು ಹೇಗೆ ಮುದ್ರಣವಾಗುತ್ತವೆ ಎಂಬುದನ್ನು ನೋಡಿರಲಿಲ್ಲ. ಇಂದು ಅದು ಸಹ ಸಕಾರಗೊಂಡಿದೆ. ಇದು ದೊಡ್ಡ ಮತ್ತು ವಿಸ್ತಾರವಾದ ಪ್ರಿಂಟಿಂಗ್ ಪ್ರೆಸ್ ಆಗಿದೆ. ಹೊಸ ತಂತ್ರಜ್ಞಾನದೊಂದಿಗೆ ಬೃಹತ್ ಯಂತ್ರಗಳನ್ನೂ ಅಳವಡಿಸಲಾಗಿದೆ. ಅದನ್ನು ನೋಡುವುದೇ ಖುಷಿ.
ಶಾಲೆಯ ಅಡುಗೆ ತಯಾರಿಕಾ ಸಿಬ್ಬಂದಿ