ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಹನ ಜಖಂಗೊಂಡಿದೆ. 
ಮೈಸೂರು

ಕಾಡಾನೆ ದಾಳಿಗೆ ವಾಹನ ಜಖಂ

ನಾಗೇಶ ಎಸ್
ಸರಗೂರು: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಹನ ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತಾಲೂಕಿನ ನುಗು ವನ್ಯಜೀವಿ ವಲಯದ ಕಾಡಿನಿಂದ ಹೊರಬಂದಿದ್ದ ಕಾಡಾನೆಗಳನ್ನು ನುಗು ಜಲಾಶಯದ ಮೀನು ಮರಿ ಉತ್ಪಾದನಾ ಕೇಂದ್ರದ ಮಾರ್ಗದ ಮೂಲಕ ಮತ್ತೆ ಕಾಡಿಗೆ ಓಡಿಸುವಾಗ ಅಡ್ಡಲಾಗಿ ಬಂದ ಇಲಾಖೆ ವಾಹನಕ್ಕೆ ಕಾಡಾನೆ ಗುದ್ದಿದೆ. ಅದೃಷ್ಟವಶಾತ್ ವಾಹನ ಸ್ವಲ್ಪ ಜಖಂಗೊಂಡಿದ್ದು, ಚಾಲಕ ಪಾರಾಗಿದ್ದಾರೆ.
ಭಾನುವಾರ ರಾತ್ರಿ ನುಗು ಅರಣ್ಯದಿಂದ ಕಾಡಾನೆಗಳು ಹೊರ ಬಂದು, ಜಲಾಶಯದ ಮೀನು ಮರಿ ಉತ್ಪಾದನಾ ಕೇಂದ್ರದ ಮೂಲಕ ಹಾದು ಹಳೇಹೆಗ್ಗುಡಿಲು ಗ್ರಾಮದ ಹತ್ತಿರವಿರುವ ಕಾಡಿನಲ್ಲಿ ತಂಗಿದ್ದವು. ಇದರ ಮಾಹಿತಿ ಅರಿತ ಅಧಿಕಾರಿಗಳು ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಿದಾಗ ವಾಹನ ಗುದ್ದಿದೆ.