ತಿ.ನರಸೀಪುರ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನೂತನ ನಿರ್ದೇಶಕರು ವಿಜಯೋತ್ಸವ ಆಚರಿಸಿದರು. ಹಿರಿಯೂರು ನಾಗಪ್ಪ, ವೀರೇಂದ್ರ(ನವೀನ್),ಶಿವಣ್ಣ, ರೇಣುಕಣ್ಣ, ಪರಮೇಶ್, ಚೌಹಳ್ಳಿ ಮಹದೇವಪ್ಪ, ಡಿ.ಸೋಮಶೇಖರ್, ಪ್ರದೀಪ್ ಕುಮಾರ್, ವೆಂಕಟೇಶ್ ಇತರರು ಇದ್ದರು.
ತಿ.ನರಸೀಪುರ: ತಾಲೂಕಿನ ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಹಿರಿಯೂರು ವೀರೇಂದ್ರ(ನವೀನ್) ಬಣ ಭರ್ಜರಿ ಜಯ ಸಾಧಿಸಿದ್ದು, ಸಂಘದ 12 ಸ್ಥಾನವೂ ಅವರ ಬೆಂಬಲಿಗರೇ ಆಯ್ಕೆಗೊಂಡಿದ್ದಾರೆ.
ಸಹಕಾರ ಸಂಘದ ಒಟ್ಟು 12 ನಿರ್ದೇಶಕರ ಪೈಕಿ ಶನಿವಾರ 5 ಸ್ಥಾನಗಳಿಗೆ ಮಾತ್ರವೇ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಉಳಿದ 7 ಸ್ಥಾನಗಳಿಗೆ ಮಾ. 7ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ 7 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಐವರು ನಿರ್ದೇಶಕರ ಆಯ್ಕೆಗಾಗಿ ಸಹಕಾರ ಸಂಘದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹಿರಿಯೂರು ನವೀನ್ ಬಣದಿಂದ ಸಾಲಗಾರರ ಕ್ಷೇತ್ರದಿಂದ ಆಯ್ಕೆ ಬಯಸಿ ಎಂ.ಗುರುಸ್ವಾಮಿ, ಸಿ.ಎಸ್.ನಂಜುಂಡಸ್ವಾಮಿ, ಸಿ.ಎಸ್.ಪ್ರಭುಸ್ವಾಮಿ, ಎಸ್.ವೀರೇಶ್, ಸಹಜಾನಂದ ಸ್ವಾಮಿ ಹಾಗೂ ಎದುರಾಳಿ ಬಣದಿಂದ ಮಹದೇವಪ್ಪ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಎದುರಾಳಿ ಬಣದ ಮಹದೇವಪ್ಪ ಸೋಲನುಭವಿಸಿದರೆ ಉಳಿದ ಐವರು ಜಯಗಳಿಸಿದರು. ಚುನಾವಣೆಯಲ್ಲಿ ಒಟ್ಟು 319 ಮತಗಳ ಪೈಕಿ 283 ಮತಗಳು ಚಲಾವಣೆಯಾದವು.
ಉಳಿದಂತೆ ಮಾ.7ರಂದು ಸಾಲಗಾರರ ಕ್ಷೇತ್ರದಿಂದ ಆಯ್ಕೆ ಬಯಸಿ ರಾಜೇಶ್ವರಿ, ಎಚ್.ಎಂ.ಕೋಮಲಾ, ಎಂ.ಎಸ್.ರಾಜಶೇಖರ ಮೂರ್ತಿ, ಎಚ್.ಎಂ.ಮನೋಜ್ ಕುಮಾರ್, ಎಂ.ಗಿರಿಮಲ್ಲಯ್ಯ ಹಾಗೂ ಎಂ.ರವಿಕುಮಾರ್, ಸಾಲಗಾರರಲ್ಲದ ಕ್ಷೇತ್ರದಿಂದ ಗುರುಮಲ್ಲಪ್ಪ(ಶೇಖರಪ್ಪ) ಉಮೇದುವಾರಿಕೆ ಸಲ್ಲಿಸಿದ್ದರು. ಇವರ ಹೊರತು ಬೇರ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಹಸೀನಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಹಕಾರ ಸಂಘದ ಎಲ್ಲ 12 ಸ್ಥಾನಗಳನ್ನು ಜಯಗಳಿಸಿದ ಹಿನ್ನೆಲೆಯಲ್ಲಿ ಸಹಕಾರ ಸಂಘದ ಆವರಣದಲ್ಲಿ ವಿಜೇತ ಅಭ್ಯರ್ಥಿಗಳು ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿದರು.
ಕೆಡಿಪಿ ಸದಸ್ಯ ಹಿರಿಯೂರು ವೀರೇಂದ್ರ(ನವೀನ್) ಮಾತನಾಡಿ, ಚುನಾವಣೆ ಮೂಲಕ ಹಾಗೂ ಅವಿರೋಧವಾಗಿ ಆಯ್ಕೆಯಾಗಿರುವ ಸಹಕಾರ ಮಂಡಳಿಯ ಎಲ್ಲ ನಿರ್ದೇಶಕರು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಜತೆಗೆ ಈ ಭಾಗದ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿಸಬೇಕೆಂದು ಸಲಹೆ ನೀಡಿದರು.
ಡೇರಿ ಕಾರ್ಯದರ್ಶಿ ನಿಲಸೋಗೆ ನಂಜುಂಡಸ್ವಾಮಿ, ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗಪ್ಪ, ಮುಖಂಡರಾದ ಶಿವಣ್ಣ, ರೇಣುಕಣ್ಣ, ಪರಮೇಶ್, ಚೌಹಳ್ಳಿ ಮಹದೇವಪ್ಪ, ಡಿ.ಸೋಮಶೇಖರ್, ಪ್ರದೀಪ್ ಕುಮಾರ್, ವೆಂಕಟೇಶ್, ಮಹದೇವಸ್ವಾಮಿ, ಸೋಮಣ್ಣ, ಶಂಕರ, ತ್ರಿಪುರ, ಸಿ.ಬಿ.ಹುಂಡಿ ಗೌಡ್ರ ಸೋಮಣ್ಣ, ಸಿ.ಎಸ್.ನಿಂಗಪ್ಪ, ನಿಲಸೋಗೆ ಬಸವರಾಜು, ರೇವಣ್ಣ, ಮಹದೇವಪ್ರಸಾದ್, ಸಿ.ಪಿ.ಮಹದೇವಪ್ಪ, ವೀರಪ್ಪ, ಪೃಥ್ವಿ, ಕರಿಬಸವೇಗೌಡ, ಸಿ.ಎಸ್.ನಂದೀಶ್, ಕಾಂಗ್ರೆಸ್ ಮುಖಂಡ ಎಂ.ಗಿರೀಶ್, ಸಂಘದ ಕಾರ್ಯದರ್ಶಿ ಉಮೇಶ್ ಇತರರು ಇದ್ದರು.