ಮೈಸೂರು: ಜಿಲ್ಲಾ ಉಪ್ಪಾರ ಸಂಘದ ವತಿಯಿಂದ ಜ.11ರಂದು ಬೆಳಗ್ಗೆ 10.30ಕ್ಕೆ ನಗರದ ಗೋವರ್ಧನ್ ಹೋಟೆಲ್ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಸಮಾಜ ಸೇವಕರಿಗೆ ಸನ್ಮಾನ ಹಾಗೂ 2026ನೇ ಸಾಲಿನ ಸಂಘದ ದಿನದರ್ಶಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಟಿ.ಮೋಹನ್‌ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸದುರ್ಗದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ವಹಿಸುವರು. ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸುವರು. ಭಗೀರಥ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ, ಉಪ್ಪಾರ ಹಾಗೂ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ ನೆರವೇರಿಸುವರು. ಜಿಲ್ಲಾ ಉಪ್ಪಾರ ಸಂಘದ 2026ನೇ ಸಾಲಿನ ದಿನದರ್ಶಿಕೆಯನ್ನು ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಕೆಎಂಎಫ್ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ ಹಾಗೂ ಮಾಜಿ ಉಪಮೇಯರ್ ಡಾ.ರೂಪ ಯೋಗೇಶ್ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ನಾಗರಾಜು ಕರಳಪುರ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂವಿಧಾನ, ಸಾಮಾಜಿಕ ಸಮೀಕ್ಷೆಗಳ ಬಗ್ಗೆ ಜಾಗೃತಿ ಉಪನ್ಯಾಸವನ್ನು ಜಿಲ್ಲಾ ಪಂಚಾಯಿತಿಯ ನಿವೃತ್ತ ಉಪ ಕಾರ್ಯದರ್ಶಿ ಕೆ.ಎಂ.ಶಿವಕುಮಾರ ಸ್ವಾಮಿ ನೀಡುವರು. ವೃತ್ತ ನಿರೀಕ್ಷಕರಾದ ಸಿ.ಶಿವನಂಜಶೆಟ್ಟಿ, ಮಹದೇವಸ್ವಾಮಿ, ಸಬ್ ಇನ್ಸ್‌ಪೆಕ್ಟರ್‌ಗಳಾದ ಕೃಷ್ಣಕಾಂತ್ ಕೋಳಿ, ಬಸವರಾಜು, ಅರಣ್ಯ ಅಧಿಕಾರಿ ಸೋಮು, ಬೆಂಗಳೂರು ಗ್ರಾಮಾಂತರ ಉಪ್ಪಾರ ಸಂಘದ ಅಧ್ಯಕ್ಷ ಸುನಿಲ್, ಗೌರಿಬಿದನೂರಿನ ಉದ್ಯಮಿ ನಾಗರಾಜು ಸೇರಿದಂತೆ ಸಮಾಜದ ಸಾಧಕರು ಸಮಾಜ ಸೇವಕರು ಹಾಗೂ ಗಣ್ಯರನ್ನು ಅಭಿನಂದಿಸಲಾಗುವುದು ಎಂದರು.
ಗೌರವಾಧ್ಯಕ್ಷ ಕನಕನಗರ ಮಹದೇವ್, ಪ್ರಧಾನ ಕಾರ್ಯದರ್ಶಿ ಜೆ.ಕೃಷ್ಣ, ಸಂಘಟನಾ ಕಾರ್ಯದರ್ಶಿ ಆರ್.ವಿನೋದ್ ಉಪ್ಪಾರ್, ಕಾರ್ಯದರ್ಶಿ ಮಲ್ಲೇಶ್, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ಗೌರವಾಧ್ಯಕ್ಷೆ ಡಾ.ಗೀತಾ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರಿ, ಪದಾಧಿಕಾರಿಗಳಾದ ಮಹೇಶ್, ವೆಂಕಟೇಶ್ ಉಪಸ್ಥಿತರಿದ್ದರು.