ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಬಿ.ಎಲ್.ಪ್ರಾಣೇಶ್ ಹಾಗೂ ಉದಯಕುಮಾರ್ ಅವರನ್ನು ನಿರ್ದೇಶಕರು ಮತ್ತು ಮುಖಂಡರು ಸನ್ಮಾನಿಸಿದರು. 
ಮೈಸೂರು

ಬ್ಯಾಡರಹಳ್ಳಿ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ
  • ಅಧ್ಯಕ್ಷರಾಗಿ ಬಿ.ಎಲ್.ಪ್ರಾಣೇಶ್, ಉಪಾಧ್ಯಕ್ಷರಾಗಿ ಉದಯಕುಮಾರ್
ಕೆ.ಆರ್.ನಗರ: ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಲ್.ಪ್ರಾಣೇಶ್, ಉಪಾಧ್ಯಕ್ಷರಾಗಿ ಉದಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸವಿತಾ ಅವಿರೋಧ ಆಯ್ಕೆ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇರ್ಶಕರಾದ ಬಿ.ಎಂ.ಮುರುಳಿಧರ, ಎಸ್.ಕೆ.ಗೌತಮ್, ರಮೇಶ್, ಕುಮಾರ್, ಉಮಾ, ಭಾಗ್ಯ, ರಮೇಶ್, ಕರಿಯಯ್ಯ, ಕೆ.ಹರೀಶ್, ಎಸ್.ಎಂ.ಶ್ರೀಕಾಂತ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್, ಸಂಘದ ಸಿಇಒ ಸಚಿನ್‌ಕುಮಾರ್ ಇದ್ದರು.
ಮಾ.8ರಂದು ಸಂಘದ ನಿರ್ದೇರ್ಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ನಿರ್ದೇರ್ಶಕರು ಚುನಾಯಿತರಾಗಿದ್ದರು. ನೂತನ ಅಧ್ಯಕ್ಷ ಬಿ.ಎಲ್.ಪ್ರಾಣೇಶ್ ಮತ್ತು ಉಪಾಧ್ಯಕ್ಷ ಉದಯಕುಮಾರ್ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.
ಕಾಂಗ್ರೆಸ್ ಮುಖಂಡರಾದ ಚೀರ‌್ನಹಳ್ಳಿಶಿವಣ್ಣ, ಮಹದೇವ್, ಚಿಕ್ಕಹಲೇಗೌಡ, ವಿನಂಯ್, ಕರೀಗೌಡ ಮತ್ತಿತರರು ಅಭಿನಂದಿಸಿದರು.