ಬನ್ನೂರಿನ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದಿಂದ ಎಸ್‌ಆರ್‌ಪಿ ರಸ್ತೆಯಲ್ಲಿರುವ ವೃತ್ತದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ 165ನೇ ವರ್ಷದ ಜನ್ಮದಿನವನ್ನು ಆಚರಿಸಲಾಯಿತು. ಗಂಗಾಧರ್, ವೈ.ಎಸ್.ರಾಮಸ್ವಾಮಿ, ಲೋಕೇಶ್‌ಗೌಡ, ಹನುಮನಾಳು ಹೊಂಬೇಗೌಡ ಇದ್ದರು. 
ಮೈಸೂರು

ಸರ್ ಎಂ.ವಿಶ್ವೇಶ್ವರಯ್ಯ ಕೊಡುಗೆ ಅರಿಯಿರಿ

ಬನ್ನೂರು: ಕನ್ನಡನಾಡು ಸೇರಿದಂತೆ ವಿಶ್ವಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಮಹಾನ್ ನಾಯಕ ಸರ್ ಎಂ.ವಿಶ್ವೇಶ್ವರಯ್ಯ. ಇಂತಹ ಮಹಾನ್ ನಾಯಕರು ಕನ್ನಡನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ ಆಶಿಸಿದರು.
ಪಟ್ಟಣದ ಸಮೀಪದ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದಿಂದ ಎಸ್‌ಆರ್‌ಪಿ ರಸ್ತೆಯಲ್ಲಿರುವ ವೃತ್ತದಲ್ಲಿ ಆಯೋಜಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ವಿಶ್ವೇಶ್ವರಯ್ಯ ಜನ್ಮ ದಿನವನ್ನು ಭಾರತದಲ್ಲಿ ಇಂಜಿನಿಯರ್ಸ್‌ ದಿನವಾಗಿ ಆಚರಣೆ ಮಾಡುತ್ತಾರೆ ಎಂದರೆ ಕೂಡುಗೆ ಎಷ್ಟು ಮಹತ್ವದ್ದು ಎನ್ನುವುದನ್ನು ನಾವೆಲ್ಲರೂ ಅರಿಯಬೇಕು ಎಂದರು.
ಮೈಸೂರಿನ 19ನೇ ದಿವಾನರಾಗಿ ಸೇವೆ ಸಲ್ಲಿಸಿ, ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಅಣೆಕಟ್ಟು ನಿರ್ಮಿಸಿ, ಲಕ್ಷಾಂತರ ಎಕರೆಯನ್ನು ನೀರಾವರಿ ಭೂಮಿಯಾಗಿ ಪರಿವರ್ತನೆ ಮಾಡಿದರು ಎಂದರು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್, ಮೈಸೂರು ಜಿಲ್ಲಾ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್‌ಗೌಡ ಮಾತನಾಡಿದರು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ, ಮೈಸೂರು ಜಿಲ್ಲಾ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್‌ಗೌಡ, ಹನುಮನಾಳು ಹೊಂಬೇಗೌಡ ಸೇರಿದಂತೆ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದ ಸದಸ್ಯರು ಇದ್ದರು.