Lorrry Hitted spot 
ಮೈಸೂರು

ಬೈಕ್-ಲಾರಿ ಡಿಕ್ಕಿಯಾಗಿ ಸ್ನೇಹಿತರಿಬ್ಬರ ದುರ್ಮರಣ

ನಂಜನಗೂಡು: ತಾಲೂಕಿನ ಹನುಮನಪುರ ಗೇಟ್ ಬಳಿ ಶುಕ್ರವಾರ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ನಡೆದಿದೆ.
ಮೈಸೂರಿನ ಜೆ.ಪಿ.ನಗರದ ಚಂದ್ರು (38) ನಡುಕಲು ಮೋಳೆ ಗ್ರಾಮದ ಶೀಲಾ (35) ಮೃತಪಟ್ಟವರು.
ಚಂದ್ರು ಮತ್ತು ಶೀಲಾ ಬೈಕ್‌ನಲ್ಲಿ ಕಾರ್ಯ ಸಿದ್ದೇಶ್ವರ ಬೆಟ್ಟದ ರಸ್ತೆಯಿಂದ ಸಂತೇಮರಳ್ಳಿ ಕಡೆಗೆ ಹೋಗುತ್ತಿದ್ದರು. ಚುಂಚನಹಳ್ಳಿ ಭಾಗದಿಂದ ಗೊಬ್ಬರದ ಲಾರಿ ಬರುತ್ತಿದ್ದ ಸಂದರ್ಭದಲ್ಲಿ ಹನುಮನಪುರ ಗೇಟ್ ಬಳಿ ಶುಕ್ರವಾರ ಸಂಜೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಚಂದ್ರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಶೀಲಾ ಬೈಕ್‌ನಿಂದ ಕೆಳಗಡೆ ಬಿದ್ದ ಪರಿಣಾಮ ಇಬ್ಬರ ಮೇಲೆ ಲಾರಿ ಚಕ್ರ ಹರಿದು ದೇಹ ಛಿದ್ರಗೊಂಡು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.
ಸ್ನೇಹಿತರಾಗಿದ್ದ ಇಬ್ಬರೂ ಕಾರ್ಯನಿಮಿತ್ತ ಬೈಕಿನಲ್ಲಿ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ರಘು, ಸಿಪಿಐ ಚಂದ್ರಶೇಖರ್, ಕವಲಂದೆ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜು, ಎಸ್.ಬಿ ರಮೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆದಿರುವ ಕವಲಂದೆ ಠಾಣೆ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಾಲೂಕಿನ ಹನುಮನಪುರ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ವಾಹನ ಸವಾರರು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿರುವ ದೃಶ್ಯ.