ದಸರಾ ಆನೆಗಳು 
ಮೈಸೂರು

ರಾಜಮಾರ್ಗದಲ್ಲಿ ಗಜಪಡೆಯ ತಾಲೀಮು

ಅವಿನಾಶ್ ಜೈನಹಳ್ಳಿ
ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ದಸರಾ ಗಜಪಡೆಯ 9 ಆನೆಗಳು ಸೋಮವಾರ ಬೆಳಗ್ಗೆ ಮತ್ತು ಸಂಜೆ ಎರಡು ಅವಧಿಯಲ್ಲಿ ರಾಜಮಾರ್ಗದಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವ ಮೂಲಕ ಯಶ್ವಸಿಯಾಗಿ ತಾಲೀಮು ನಡೆಸಿದವು.
ಬೆಳಗ್ಗೆ 7 ಗಂಟೆಗೆ ಅರಮನೆಯಿಂದ ಹೊರಟ ಗಜಪಡೆ ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ ಮಾರ್ಗವಾಗಿ ಆಯುರ್ವೇದ ಕಾಲೇಜು ವೃತ್ತದವರೆಗೆ ಸಾಗಿತು. ಬಳಿಕ ಅಲ್ಲಿಂದ ಮತ್ತೆ ಅರಮನೆಗೆ ಬೆಳಗ್ಗೆ 7.30ರ ವೇಳೆಗೆ ಹಿಂದಿರುಗಿತು. ಮತ್ತೆ ಸಂಜೆಯೂ ಆಯುರ್ವೇದ ಕಾಲೇಜು ವೃತ್ತದವರೆಗೆ ಯಶಸ್ವಿಯಾಗಿ ತಾಲೀಮು ನಡೆಸಿವೆ.
ದೃಶ್ಯ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು. ತಾಲೀಮು ವೇಳೆ ಗಜಪಡೆಯನ್ನು ವೀಕ್ಷಿಸುವ ಸಲುವಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಗಜಪಡೆ ಸಾಗುವ ಮಾರ್ಗದಲ್ಲಿ ಜನರು ಅಡ್ಡ ಬಾರದಂತೆ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಸಾರ್ವಜನಿಕರು ಮೊಬೈಲ್‌ಗಳಲ್ಲಿ ಆನೆಗಳ ಚಿತ್ರ ಹಾಗೂ ವಿಡಿಯೋ ಸೆರೆಹಿಡಿದು ಸಂಭ್ರಮಿಸಿದರು.