ಸುಂಕದಹಳ್ಳಿ ಗ್ರಾಮದ ಅಂಗವಿಕಲ ಸಾಧಿಕ್ ಅವರಿಗೆ ರೋಟರಿ ಮಿಡ್‌ಟೌನ್ ವತಿಯಿಂದ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ತಿರುಮಲಾಪುರ ರಾಜೇಗೌಡ, ಜಿ.ಕೆ.ಜಗನ್, ಚೇತನ್, ಐಕೆಪಿ ಹೆಗಡೆ ಇದ್ದರು. 
ಮೈಸೂರು

ಅಂಗವಿಕಲ ಸಾಧಿಕ್‌ಗೆ ತ್ರಿಚಕ್ರ ಸೈಕಲ್ ಕೊಡುಗೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಇಪ್ಪತ್ತೊಂದು ವರ್ಷದ ಸಾದಿಕ್
  • ತಾಲೂಕು ರೋಟರಿ ಮಿಡ್‌ಟೌನ್
ಬೈಲುಕುಪ್ಪೆ: ಅಂಗವಿಕಲತೆಯಿಂದ ಬಳಲುತ್ತಿದ್ದ ಇಪ್ಪತ್ತೊಂದು ವರ್ಷದ ಸಾದಿಕ್ ಅವರಿಗೆ ತಾಲೂಕು ರೋಟರಿ ಮಿಡ್‌ಟೌನ್ ವತಿಯಿಂದ ತ್ರಿಚಕ್ರ ಸೈಕಲ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಪಿರಿಯಾಪಟ್ಟಣ ತಾಲೂಕಿನ ಅವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಲಯ 6ರ ತಿರುಮಲಪುರ ರಾಜೇಗೌಡ ಅವರು ತ್ರಿಚಕ್ರ ಸೈಕಲ್ ಅನ್ನು ಕೊಡುಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು.
ಸಾದಿಕ್ ನಡೆದಾಡಲು ಸಾಧ್ಯವಾರದಿರುವ ಕುರಿತು ಆತನ ತಂದೆ ಸಮಿವುಲ್ಲ ರೋಟರಿ ಮಿಡ್‌ಟೌನ್‌ನ ಗಮನ ಸೆಳೆದಿದ್ದರು.ತಾಲೂಕು ರೋಟರಿ ಮಿಡ್ ಟೌನ್ ಅಧ್ಯಕ್ಷ ಜಿ.ಕೆ.ಜಗನ್, ಕಾರ್ಯದರ್ಶಿ ಟಿ.ಕೆ.ಚೇನ್, ಖಜಂಚಿ ಐಕೆಪಿ ಹೆಗಡೆ, ಸದಸ್ಯ ಸುನಿಲ್ ಕುಮಾರ್‌ಗೌಡ ಇತರರಿದ್ದರು.