ತಿ.ನರಸೀಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ನವೀಕೃತ ಸಭಾ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ವಾಟಾಳು ಮಠದ ಶ್ರೀಗಳನ್ನು ಪೂಜಿತ್ ಮೆಡಿಕಲ್ಸ್ ಕುಮಾರ ಸ್ನೇಹ ಬಳಗದ ವತಿಯಿಂದ ಬೃಹದಾಕಾರದ ಭಾವಚಿತ್ರ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಡಾ. ಎಚ್.ಸಿ. ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ಸಿ.ಎಂ.ಪ್ರಕಾಶ್, ಕೆ.ವಿ.ಶಿವಶಂಕರ್, ಎಸ್.ಕೆ. ಕಿರಣ, ಮೂಗೂರು ಕುಮಾರಸ್ವಾಮಿ ಇತರರು ಇದ್ದರು. 
ಮೈಸೂರು

ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಕುಮಾರ ಸ್ನೇಹ ಬಳಗದಿಂದ ಗೌರವ ಸಮರ್ಪಣೆ
  • ನವೀಕೃತ ಸಭಾ ಭವನ ಉದ್ಘಾಟನೆ ಸಮಾರಂಭ
ತಿ.ನರಸೀಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಾರಂಭಗೊಂಡ ದಿನದಿಂದ ಸುಮಾರು 43 ವರ್ಷಗಳ ಕಾಲ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿರುವ ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ನವೀಕೃತ ಸಭಾ ಭವನ ಉದ್ಘಾಟನೆ ಸಮಾರಂಭದಲ್ಲಿ ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಕುಮಾರ ಸ್ನೇಹ ಬಳಗದ ವತಿಯಿಂದ ಬೃಹದಾಕಾರದ ಭಾವಚಿತ್ರ ನೀಡಿ ಗೌರವ ಸಮರ್ಪಿಸಲಾಯಿತು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಸಂಪನ್ನಗೊಂಡ ಸಭಾ ಭವನದ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯ ಸಮಾರಂಭದಲ್ಲಿ ಧಾರ್ಮಿಕ ಸೇವೆಯ ಜತೆಗೆ ಸಮುದಾಯಕ್ಕೂ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಹರಗುರು ಚರಮೂರ್ತಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸನ್ಮಾನಿಸಿ, ಆಶೀರ್ವಾದ ಪಡೆದು ಅಭಿನಂದಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ , ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಸಾಲೂರು ಬೃಹನ್ಮಠದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಠಾಧ್ಯಕ್ಷರಾದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಉಪಾಧ್ಯಕ್ಷ ಎಸ್.ಕೆ. ಕಿರಣ್, ಕಾರ್ಯದರ್ಶಿ ಪರಮೇಶ್ ಪಟೇಲ್, ನಿರ್ದೇಶಕರಾದ ಗುರುಸ್ವಾಮಿ, ತೋಂಟೇಶ್, ಕೆಇಬಿ ಸಿದ್ದಲಿಂಗಸ್ವಾಮಿ, ವಕೀಲ ಜ್ಞಾನೇಂದ್ರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಕೆಬ್ಬೆಹುಂಡಿ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಕೆ.ಎನ್. ಅಶೋಕ್, ನಿಲಸೋಗೆ ಪ್ರಸಾದ್, ಎಸ್.ಮಧು ಕುಮಾರ್ ಇದ್ದರು.