ಸರಗೂರು ತಾಲೂಕಿನ ಪಟ್ಟಣದ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸುಧಾ ಮೃತ್ಯುಂಜಯಪ್ಪ ಚಾಲನೆ ನೀಡಿದರು.ಸೀಮಾ, ಶೀಲಾ, ಉಮಾ ಮಂಜುಳಾ ಇತ್ತರರು ಇದ್ದರು.
ಸರಗೂರು. :
ಸಸಿ ನೆಡುವುದು ಕೇವಲ ಒಂದು ದಿನದ ಆಚರಣೆಯಾಗದೇ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು. ಪರಿಸರ, ಪಶು-ಪಕ್ಷಿಗಳು ಹಾಗೂ ಗಿಡಮರಗಳು ಸಮೃದ್ಧವಾಗಿದ್ದರೆ ಮಾತ್ರ ಮನುಕುಲದ ಪ್ರಗತಿ ಸಾಧ್ಯ. ಇಲ್ಲವಾದರೆ ಇಡೀ ಜೀವಸಂಕುಲವೇ ನಾಶವಾಗಿ ಭೂಮಿ ಮರುಭೂಮಿಯಾಗುವ ಅಪಾಯವಿದೆ ಎಂದು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಹಾಗೂ ಸ್ನೇಹ ಸ್ತ್ರೀ ಸಮಾಜ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಹೇಳಿದರು.
ಪಟ್ಟಣದ ಜೆಎಸ್ಎಸ್ ಶಾಲೆ ಆವರಣದಲ್ಲಿ ಸೋಮವಾರ ದಂದು ಡಾ ಸಿ ಎನ್ ಮೃತ್ಯುಂಜಯಪ್ಪ ಸಹೃದಯ ಬಳಗವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ‘ವೈದ್ಯರತ್ನಗಾಗಿ ಒಂದು ಗಿಡ’ ಕಾರ್ಯಕ್ರಮದ ಸಸಿ ನೆಟ್ಟು ನೀರು ಹಾಕಿ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಲ್ಲದೆ ನಾವೆಲ್ಲರೂ ಸಸಿಗಳನ್ನು ನೆಡುವ ಮೂಲಕ ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಿಸಲು ಸಾಧ್ಯ ಎಂದರು .
ಆಧುನಿಕತೆ ಬೆಳೆದಂತೆ ಮನುಷ್ಯನ ಆಸೆಗೆ ಪರಿಸರ ನಾಶವಾಗಿ ಕಾಲಕಾಲಕ್ಕೆ ಮಳೆ ಬಾರದೆ ಇರುವುದರಿಂದ ಅಂತರ್ಜಲ ಬತ್ತಿ ಹೋಗಿದ್ದು. ಇದರಿಂದ ಕುಡಿಯುವ ಶುದ್ಧ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ಕುಡಿಯುವ ನೀರು ಖರೀದಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಕೇವಲ ಪರಿಸರದ ದಿನ ಗಿಡಗಳನ್ನು ನೆಟ್ಟರೆ ಸಾಲದು ಅವನ್ನು ಪೋಷಿಸಿಬೇಕು. ಅವುಗಳನ್ನು ರಕ್ಷಿಸಬೇಕು. ಒಂದು ಮರವು ತನ್ನ ಜೀವಿತ ಅವಧಿಯಲ್ಲಿ ಲಕ್ಷಾಂತ ರು. ಬೆಲೆಬಾಳುವಂತಹ ಆಮ್ಲಜನಕವನ್ನು ನೀಡುತ್ತೆ. ಅದೇ ರೀತಿ ತನ್ನ ಜೀವತ ಅವಧಿಯಲ್ಲಿ ನಮಗೆ ಏನೆಲ್ಲಾ ನೀಡುತ್ತದೆ. ಆದರೆ ನಾವು ಅವುಗಳನ್ನು ನಾಶ ಮಾಡುತ್ತಿರುವುದು ನಿಲ್ಲಬೇಕು. ಪ್ರತಿಯೊಬ್ಬ ಮನುಷ್ಯ ಗಿಡ ಮರಗಳನ್ನು ನೆಡುವ ಮೂಲಕ ಆರೋಗ್ಯಕರ ಪರಿಸರ ಸೃಷ್ಟಿಗೆ ಮುಂದಾಗಬೇಕೆಂದು ತಿಳಿಸಿದರು.
ಪ್ರತಿದಿನ ಒಂದು ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದು, ಅವರ ಮಾದರಿಯನ್ನು ಎಲ್ಲರೂ ಅನುಸರಿಸಬೇಕು ಎಂದರು. ಕೃಷಿಯಿಂದ ದೂರವಾಗುತ್ತಿರುವ ಯುವಜನರನ್ನು ಮತ್ತೆ ಕೃಷಿಯತ್ತ ಸೆಳೆಯಲು ಮಲ್ಟಿ ಕ್ರಾಪಿಂಗ್ ಹಾಗೂ ಆಧುನಿಕ ಕೃಷಿ ಪದ್ಧತಿಗಳು ಅಗತ್ಯವೆಂದು ತಿಳಿಸಿದರು.
ಪ್ರತಿಯೊಂದು ಗಿಡ ನೆಡುವ ಮುಂದಿನ ಪೀಳಿಗೆಗಳಿಗೆ ಪರಿಸರ ಜಾಗೃತಿಯ ಸಂಕೇತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸ್ನೇಹ ಸ್ತ್ರೀ ಸಮಾಜ ಕಾರ್ಯದರ್ಶಿ ಸೀಮಾ ಎಸ್ ಎಸ್ ಮೋಹನ್, ಪದಾಧಿಕಾರಿಗಳಾದ ಶೀಲಾ ದಯಾಶಂಕರ, ಉಮಾ ಪ್ರತಾಪ್, ಮಂಜುಳಾ ಪ್ರವೀಣ್, ಶೋಭಾ ಮಂಜಣ್ಣ,ಸುಮಾ ಮಹೇಶ್,ಕಲಾ ಗೋವಿಂದರಾಜು, ಪುಷ್ಪ ಶಾಂತರಾಜು, ರೇಣುಕಾ ಲೋಕೇಶ್, ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗರತ್ನಮ್ಮ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಯಣ್ಣ, ಕೃಷ್ಣಮೂರ್ತಿ, ಅಶೋಕ್,ಶಾಲೆ ಕಾಲೇಜು ಶಿಕ್ಷಕರು ವೃಂದ ಹಾಗೂ ಸ್ನೇಹ ಸ್ತ್ರೀ ಸಮಾಜ ಸಂಘದ ಸದಸ್ಯರು ಹಾಗೂ ಟೈಲರಿಂಗ್ ತರಬೇತಿ ಶಿಬಿರ ಸದಸ್ಯರು ಭಾಗವಹಿಸಿದ್ದರು.