ತಿ.ನರಸೀಪುರ ಪಟ್ಟಣದ ವಾಸವಿ ಮಹಲ್ ಸಭಾಂಗಣದಲ್ಲಿ ಭಾನುವಾರ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬಿ.ಎನ್.ಸುಧಾಕರ್, ಡಾ. ಕೆಸ್ತೂರ್ ನಾಗರಾಜ್ ಅಮೃತೇಶ್, ನಂಜನಗೂಡು ವಿನಯ್ ಕುಮಾರ್, ಟಿ.ಎಸ್. ಶಾಂತರಾಜು, ಎನ್.ಶಿವಪ್ರಸಾದ್, ವೀರೇಶ್ ಇತರರು ಇದ್ದರು. 
ಮೈಸೂರು

ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ

ಎ. ಆರ್. ರಘುರಾಮ
ಪಟ್ಟಣದ ವಾಸವಿ‌ ಮಹಲ್ ಸಭಾಂಗಣದಲ್ಲಿ ಭಾನುವಾರ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಗೌರವ ಗುರುರಕ್ಷೆ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆ ಕಾಣಬೇಕು, ಮೇಲು, ಕೀಳು ಭಾವನೆಯನ್ನು ತೊಲಗಿಸಿ, ಎಲ್ಲರೂ ಮಾನವತ್ವವನ್ನು ಹೊಂದಿ ಮನುಷ್ಯರಾಗಿ ಬಾಳುವಂತೆ ವಿಶ್ವದ ಮನುಕುಲಕ್ಕೆ ಸಾರಿದರು,ಮನುಷ್ಯ ಯಾವುದೇ ಧರ್ಮದಲ್ಲಿ ಹುಟ್ಟಿದ್ದರೂ ವಿಶ್ವ ಮಾನವ ಧರ್ಮ ಪರಿಪಾಲನೆ ಮಾಡಬೇಕು. ಜಗದ್ಗುರು ರೇಣುಕಾಚಾರ್ಯರು ಸದಾ ಮಾನವ ಧರ್ಮಕ್ಕೆ ಜಯವಾಗಲಿ ಎಂಡಿದ್ದಾರೆ ಎಂದರು.
ಮುಡುಕುತೊರೆ ತೋಪಿನ‌ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಅಂದಿನ ಕಾಲದಲ್ಲೇ ಮಹಿಳೆಯರಿಗೆ ಸಮಾನ ಗೌರವ ನೀಡಿದ್ದರು. ಲಿಂಗಧಾರಣೆ ಮಾಡಿದವರೆಲ್ಲರೂ ಸಮಾನರು ಎಂಬ ತತ್ವದ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯನ್ನು ಮಾಡಿದ್ದರು, ಲಿಂಗಧರಿಸಿ ಲಿಂಗಪೂಜಿಸಿ ಲಿಂಗವೇ ನಾವಾಗುವ ಮಹತ್ವಪೂರ್ಣಘಟ್ಟವನ್ನು ವೀರಶೈವಧರ್ಮದಲ್ಲಿ ಕಾಣಬಹುದು. ಈ ಧರ್ಮದ ಸಂಸ್ಥಾಪಕರು ಶ್ರೀಜಗದ್ಗುರು ರೇಣುಕಾಚಾರ್ಯರು. ಇಲ್ಲಿಯ ವೈಶಿಷ್ಟ್ಯ ಸ್ತ್ರಿ ಸಮಾನತೆ ಸೇರಿದಂತೆ ಒಳ್ಳೆಯ ಗುಣಗಳನ್ನು ಬಳುವಳಿಯಾಗಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಎನ್.ಸುಧಾಕರ್ ಪೋಷಕರು ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿದರೆ ಸಾಲದು,ಶಿಕ್ಷಣದ ಜೊತೆಗೆ ಉತ್ತಮ‌ ಸಂಸ್ಕಾರ ಸಹ ಕಲಿಸುವುದು ಮುಖ್ಯವಾಗುತ್ತೆ, ಸಂಸ್ಕಾರ ಕಲಿಯದೇ ಮಕ್ಕಳು ಎಷ್ಟೇ ಉನ್ನತ ವ್ಯಾಸಾಂಗ ಮಾಡಿದರು ಅದು ವ್ಯರ್ಥವಾಗುತ್ತದೆ.ಗುರು ಹಿರಿಯರಿಗೆ ಗೌರವ ಕೊಡುವುದನ್ನು ಪೋಷಕರು ಮಕ್ಕಳಿಗೆ ಕಲಿಸಬೇಕು,ಮಕ್ಕಳಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ.ಸಂಬಂಧಗಳು ನಶಿಸಿ ಹೋಗುತ್ತಿವೆ.ಕೇವಲ ಸ್ನೇಹ ಮಾತ್ರ ಅವರಲ್ಲಿ ಉಳಿದಿದೆ.ಹಾಗಾಗಿ ಪೋಷಕರು ಎಚ್ಚೆತ್ತುಕೊಳ್ಳಬೇಕು,ನಶಿಸಿ ಹೋಗುತ್ತಿರುವ ಸಂಬಂಧಗಳನ್ನು ಉಳಿಸಲು ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವಂತೆ ಪ್ರೇರೇಪಿಸಬೇಕು.ಆ ಮೂಲಕ ಅವರಲ್ಲಿ ಧಾರ್ಮಿಕ ಭಾವನೆ ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಿ ಓ ಎಸ್ ಅಧ್ಯಕ್ಷ ಡಾ. ಕೆಸ್ತೂರ್ ನಾಗರಾಜ್ ಅಮೃತೇಶ್, ನಿವೃತ್ತ ಪ್ರಾಂಶುಪಾಲ ಎಸ್. ನಂದೀಶ್, ಲೆಕ್ಕಪರಿಶೋಧಕ ಆರ್.ಎನ್. ಶಿವಣ್ಣ, ನಂಜನಗೂಡು ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಸಿ.ಬಸವಣ್ಣ, ಜಯಶಂಕರಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನಯ್ ಕುಮಾರ್, ಡಾ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಜ್ಯೋತಿ, ಶ್ರೀಕಂಠಸ್ವಾಮಿ, ನಂದಿನಿ ಗಣೇಶ್ ಕುಮಾರ್, ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಎಸ್. ಶಾಂತರಾಜು, ಉಪಾಧ್ಯಕ್ಷ ಎನ್.ಶಿವಪ್ರಸಾದ್,ಕಾರ್ಯದರ್ಶಿ ನ್ಯಾಯಬೆಲೆ ಅಂಗಡಿ ವೀರೇಶ್, ಸಹ ಕಾರ್ಯದರ್ಶಿ ಎಂ.ವೀರೇಶ್, ಖಜಾಂಚಿ ಆರ್. ಸಿದ್ದಲಿಂಗಸ್ವಾಮಿ, ಸಂಚಾಲಕ ಬಿ.ನಂದೀಶ್, ನಿರ್ದೇಶಕರಾದ ಎಂ.ಸಿ. ಬಸವರಾಜು, ತೋಟದಪ್ಪ ಸಿದ್ದಲಿಂಗಸ್ವಾಮಿ, ಫ್ಯಾನ್ಸಿ ಮೋಹನ್, ಕೆ.ಜೆ. ನಾಗೇಶ್,ಅಂಗಡಿ ಶೇಖರ್, ನೂತನ್ ಹಾಗೂ ವೀರಶೈವ ಮುಖಂಡರು ಇದ್ದರು.