ಬೆಮಲ್ ಆವರಣದಲ್ಲಿ ಹುಲಿ ಪ್ರತ್ಯೇಕ್ಷ
- ಹುಲಿ ತೆರಳುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ
- ಬೋನು ಇಟ್ಟು ಸೆರೆಗೆ ಕಾಯ್ದು ಕುಳಿತ ಅರಣ್ಯ ಸಿಬ್ಬಂದಿ
ಮೈಸೂರು: ಇಷ್ಟು ದಿನ ಕಾಡಂಚಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿ ಈಗ ನಗರದ ಹೊರ ವಲಯದಲ್ಲಿಯೇ ಪ್ರತ್ಯಕ್ಷವಾಗಿದೆ.
ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಇಎಂಎಲ್ (ಬೆಮೆಲ್) ಆವರಣದಲ್ಲಿ ಹುಲಿ ಕಂಡು ಬಂದಿದೆ. ಕಾರಿನಲ್ಲಿ ಹೋಗುತ್ತಿದ್ದವರು ಈ ಹುಲಿ ತೆರಳುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಆತಂಕ ಸೃಷ್ಟಿಸಿದೆ.
ವಿಷಯ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಲಿ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ಬೋನು ಇಟ್ಟು ಸೆರೆಗೆ ಕಾಯ್ದು ಕುಳಿತ್ತಿದ್ದಾರೆ. ರಾತ್ರಿ ಹೊತ್ತು ಬೆಮೆಲ್ ಸುತ್ತಮುತ್ತ ಓಡಾಡುವವರು ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.