ಬೆಟ್ಟದಪುರ ಪೆಟ್ರೋಲ್ ಬಂಕ್ ಬಳಿ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿಯಿತು.  
ಮೈಸೂರು

ಗುಡುಗು, ಸಿಡಿಲು ಸಹಿತ ಮಳೆ

ಬೆಟ್ಟದಪುರ: ಬೆಟ್ಟದಪುರ ಸೇರಿದಂತೆ ವ್ಯಾಪ್ತಿಯ ಹಲವೆಡೆ ಶನಿವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಸಾಧಾರಣ ಮಳೆಯಾಗಿದೆ.
ಬೆಟ್ಟದಪುರ, ಪಿರಿಯಾಪಟ್ಟಣ ಮುಖ್ಯರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುತ್ತಿದ್ದು, ಕೆಲ ಕಾಲ ಆತಂಕ ಮೂಡಿಸಿತ್ತು.
ಇನ್ನೊಂದೆಡೆ, ಬೆಟ್ಟದಪುರ ವ್ಯಾಪ್ತಿಯಲ್ಲಿ ಸಂಜೆ ಆರಂಭವಾದ ಮಳೆ ಗುಡುಗು-ಸಿಡಿಲಿನೊಂದಿಗೆ ಸಾಧಾರಣವಾಗಿ ಸುರಿಯಿತು. ಬೇಸಿಗೆ ಬಿಸಿಗೆ ಮಳೆಯು ತಂಪು ನೀಡಿದೆ. ಈ ಮಳೆ ರೈತರಿಗೆ ಸಹ ಅನುಕೂಲವಾಗಿದ್ದು, ಈಗಾಗಲೇ ಜಮೀನನ್ನು ಹದಗೊಳಿಸಿ ಮಳೆಯ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಬಿತ್ತನೆ ಕಾರ್ಯಗಳಿಗೆ ಉತ್ತೇಜನ ನೀಡಿದೆ.