ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ಅನ್ನು ಉದ್ಘಾಟಿಸಲಾಯಿತು. ಡಾ.ಈ.ಸಿ.ನಿಂಗರಾಜ್ಗೌಡ, ಜಿ.ಎಸ್.ಸೋಮಶೇಖರ್, ಡಾ.ಸುಮಲಿನಿ ಬಿ. ಸ್ವಾಮಿ, ಡಾ.ದೀಪ್ತಿ ಚತುರ್ವೇದಿ ಇದ್ದರು.
- ಓದಿನ ಜತೆಗೆ ಪಠ್ಯೇತರ ಚುಟವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಉತ್ತಮ
- ಕ್ರೀಡೆ ದೇಹದ ಆರೋಗ್ಯಕ್ಕೂ ಹಾಗೂ ಮನಸ್ಸಿನ ಬೆಳವಣಿಗೆಗೂ ಬಹಳ ಉಪಯುಕ್ತ
ಮೈಸೂರು:ವಿದ್ಯಾರ್ಥಿಗಳು ಓದುವುದರ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಶಾಲೆ, ದೇಶಕ್ಕೆ ಕೀರ್ತಿ ತರಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ಗೌಡ ಹೇಳಿದರು.
ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬಾಸ್ಕೆಟ್ ಬಾಲ್ ಕೋರ್ಟ್ ಮತ್ತು ಗಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಜತೆಗೆ ಉದ್ಯೋಗವೂ ದೊರೆಯುತ್ತದೆ. ಆದರೆ ಇದಕ್ಕೆ ಸತತ ಸಾಧನೆ, ಪರಿಶ್ರಮ ಬೇಕಿದೆ. ಆದ್ದರಿಂದ ಓದಿನ ಜತೆಗೆ ಪಠ್ಯೇತರ ಚುಟವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಉತ್ತಮ ಎಂದರು.
ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಕಾರ್ಯದರ್ಶಿ ಎಲ್. ರವಿ ಅವರು ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಸಂಸ್ಥೆಯ ಆವರಣದಲ್ಲಿ ಸುಸಜ್ಜಿತ ಈಜುಕೊಳ, ಪುಟಬಾಲ್, ಚೆಸ್, ಅಥ್ಲೇಟಿಕ್ಸ್ ಟ್ರಾೃಕ್, ಈಗ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸುವುದರ ಜತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದಕ್ಕೆ ಅಭಿನಂದಿಸಿ ಇದೆಲ್ಲದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಮೈಸೂರು ಮಹಾನಗರಪಾಲಿಕೆ ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಮಾತನಾಡಿ, ಬಾಸ್ಕೆಟ್ ಬಾಲ್ ಆಟವು ದೇಹದ ಆರೋಗ್ಯಕ್ಕೂ ಹಾಗೂ ಮನಸ್ಸಿನ ಬೆಳವಣಿಗೆಗೂ ಬಹಳ ಉಪಯುಕ್ತವಾಗಿದೆ. ದೇಹವನ್ನು ಚುರುಕಾಗಿ ಮತ್ತು ಬಲಿಷ್ಠವಾಗಿರಿಸುತ್ತದೆ ಎಂದು ಹೇಳಿದರು.
ಬಾಸ್ಕೆಟ್‌ಬಾಲ್ ಒಂದು ತಂಡ ಆಟವಾಗಿರುವುದರಿಂದ ಆಟಗಾರರು ಒಟ್ಟಾಗಿ ಕೆಲಸ ಮಾಡುವ ಗುಣವನ್ನು ಕಲಿಯುತ್ತಾರೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ನಾಯಕತ್ವ ಹಾಗೂ ಜವಾಬ್ದಾರಿ ಭಾವನೆ ಹೆಚ್ಚಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಬಾಸ್ಕೆಟ್‌ಬಾಲ್ ಆಟವು ಆರೋಗ್ಯ, ಸ್ನೇಹಭಾವ ಮತ್ತು ವ್ಯಕ್ತಿತ್ವ ಅಭಿವೃದ್ಧಿಗೆ ಬಹಳ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಡಾ.ಸುಮಲಿನಿ ಬಿ. ಸ್ವಾಮಿ, ಪ್ರಾಂಶುಪಾಲೆ ಡಾ.ದೀಪ್ತಿ ಚತುರ್ವೇದಿ, ಸಂಸ್ಥೆಯ ಎಂ.ಮೋಹನ್, ಚಂದ್ರಣ್ಣ, ಹರೀಶ್ ಮೋಗಣ್ಣ, ಕೆ.ಎನ್. ಸಂತೋಷ್ ಇತರರು ಇದ್ದರು.