ಅಪರಾಧ 
ಮೈಸೂರು

ಚಿನ್ನಾಭರಣ, ನಗದು ಕಳವು

ಮನೆಯ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 26 ಸಾವಿರ ರೂ. ನಗದನ್ನು ದೋಚಿದ್ದಾರೆ.
ನಗರದ ಲಿಂಗಾಬುದಿ ಪಾಳ್ಯದ ಬಳಿ ಇರುವ ಅಪರ್ಣಾ ಬಡಾವಣೆಯ ನಿವಾಸಿ ಪ್ರಣವ್ ಮನೆಯಲ್ಲಿ ಈ ಘಟನೆ ನಡೆದಿದೆ.

ಕೆಲಸದ ನಿಮಿತ್ತ ಜೂ.19 ರಂದು ಕುಟುಂಬ ಸಮೇತ ಹೊರಗೆ ತೆರಳಿದ್ದರು. ಜೂ.22 ರಂದು ವಾಪಸ್ ಮನೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆ ಮಾಲೀಕರ ದೂರಿನ ಮೇರೆಗೆ ಜಂುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.