‘ಬಹುರೂಪಿ ಬಾಬಾಸಾಹೇಬ್- ಸಮತೆಯೆಡೆಗೆ ನಡಿಗೆ’ ಕುರಿತ ವಿಚಾರ ಸಂಕಿರಣ 
ಮೈಸೂರು

ರಂಗಭೂಮಿ ಪ್ರಜಾಪ್ರಭುತ್ವ ರಕ್ಷಿಸುವ ಸಾಧನ

ಪ್ರಮುಖ ಮುಖ್ಯಾಂಶಗಳು

  • ದಿ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅಭಿಮತ
  • ಪ್ರಜಾಪ್ರಭುತ್ವವನ್ನು ಒಂದೇ ಬಾರಿ ರಕ್ಷಿಸಿದರೆ ಸಾಕು ಎಂಬ ಭ್ರಮೆ ತಪ್ಪು.
  • ‘ಬಹುರೂಪಿ ಬಾಬಾಸಾಹೇಬ್- ಸಮತೆಯೆಡೆಗೆ ನಡಿಗೆ’ ಕುರಿತ ವಿಚಾರ ಸಂಕಿರಣ
ಮೈಸೂರು: ರಂಗಭೂಮಿ ಇತಿಹಾಸಿಕವಾಗಿ ಅಧೀನತೆಯ ವಿರುದ್ಧದ ಪ್ರತಿರೋಧದ ವೇದಿಕೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಮುಖ ಸಾಧನವಾಗಿದೆ ಎಂದು ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಹೇಳಿದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಾಯಣದ ವತಿಯಿಂದ ನಗರದ ಕಿರುರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಬಹುರೂಪಿ ಬಾಬಾಸಾಹೇಬ್- ಸಮತೆಯೆಡೆಗೆ ನಡಿಗೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ವಾತನಾಡಿದರು. 
ಸಂಸ್ಕೃತಿಯನ್ನು ಪ್ರಜಾಪ್ರಭುತ್ವದ ಅಲಂಕಾರವಾಗಿ ನೋಡಬಾರದು. ಅದು ಪ್ರಜಾಪ್ರಭುತ್ವವನ್ನು ಕಾಪಾಡುವ ಒಂದು ವಾರ್ಗ ಎಂದರು.
ಪ್ರಜಾಪ್ರಭುತ್ವವನ್ನು ಒಂದೇ ಬಾರಿ ರಕ್ಷಿಸಿದರೆ ಸಾಕು ಎಂಬ ಭ್ರಮೆ ತಪ್ಪು.  ಅಂಬೇಡ್ಕರ್ ದೃಷ್ಟಿಂುಲ್ಲಿ ಪ್ರಜಾಪ್ರಭುತ್ವವನ್ನು ನಿತ್ಯವೂ ಸಂಸ್ಥೆಗಳಲ್ಲೂ, ಸಾರ್ವಜನಿಕ ಚರ್ಚೆಗಳಲ್ಲೂ ಮತ್ತು ಸಾಂಸ್ಕ ೃತಿಕ ವಲಯದಲ್ಲೂ ಕಾಪಾಡಬೇಕಿದೆ ಎಂದು ಹೇಳಿದರು.
ನಾಯಕ ಪ್ರಶ್ನಾತೀತನಾದಾಗ ಪ್ರಜಾಪ್ರಭುತ್ವ ಇಕ್ಕಟ್ಟಿಗೆ ಸಿಲುಕುತ್ತದೆ ಎಂದು ಎಚ್ಚರಿಸಿದ್ದ ಅಂಬೇಡ್ಕರ್ ಅವರು ವ್ಯಕ್ತಿ ಪೂಜೆ ವಿರೋಧಿಸಿದ್ದರು. ಇದೀಗ ದೇಶದಲ್ಲಿ ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಅವರಂತೆ ಮನುಸ್ಮತಿ ಸುಟ್ಟ ಯುವತಿಯ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಅಂಬೇಡ್ಕರ್ ಅವರನ್ನು ಹೊಗಳುವ ನಾಯಕರು, ಅವರ ಹೋರಾಟ ವಾದರಿಂುಲ್ಲಿ ನಡೆದವರ ವಿರುದ್ಧವೇ ಪ್ರಕರಣ ದಾಖಲಿಸುವುದು ದ್ವಂದ್ವ ನಿಲುವು ಎಂದು ಕಿಡಿಕಾರಿದರು.
ಅಮೆರಿಕ, ಐರೋಪ್ಯ ದೇಶಗಳಿಂದ ವಸಾಹತೀಕರಣ, ಆರ್ಥಿಕ, ಸಾವಾಜಿಕ ವಿಮೋಚನೆ ಪಡೆಯಲು ನೂರಾರು ದೇಶಗಳಿಗೆ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನವೇ ವಾದರಿಯಾಗಿದೆ. ದೇಶವು ಸಾರ್ವಭೌಮವಾಗಿ ಉಳಿಯಲು ಬೇಕಾದ ಬುನಾದಿಯನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದ್ದು, ಇದು ಕೇವಲ ನಮಗೆ ವಾತ್ರ ಸಂಬಂಧಿಸಿದ್ದಲ್ಲ. 
ಜಗತ್ತಿನ ಎಲ್ಲ ದೇಶಗಳಿಗೂ ವಾದರಿಯಾಗಿದೆ. 2019ರಿಂದ ನಾಗರಿಕತೆ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದ ನಂತರ ದೇಶಾದ್ಯಂತ ಜನರು ಪ್ರತಿಭಟನೆಯಲ್ಲಿ ಸಂವಿಧಾನದ ಪ್ರತಿ ಹಿಡಿಯುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಹೇಳಿದರು. 
ನಮ್ಮ ಸಂವಿಧಾನವು ದ್ವಿತಿಯ ಮಹಾಯುದ್ಧದ ನಂತರ ಉಂಟಾದ ಜಾಗತಿಕ ಸನ್ನಿವೇಶಗಳ ಬಳುವಳಿಯೂ ಆಗಿದೆ. ನಾಜಿ, ಪ್ಯಾಸಿಸಂ ಸೋಲು, ಸಾವ್ರಾಜ್ಯಶಾಹಿಯ ಅಂತ್ಯ ಮತ್ತು ವಾನವ ಹಕ್ಕುಗಳ ಸ್ಥಾಪನೆಗಿದ್ದ ಒಲವು ಸಂವಿಧಾನ ರಚನೆಯಲ್ಲಿ ಪ್ರಭಾವ  ಬೀರಿತು ಎಂದರು.  
ಸಂವಿಧಾನವು ಸ್ಥಿರವಾದ ದಾಖಲೆ ಅಲ್ಲ, ಅದು ಸದಾ ಬೆಳೆಯುವ, ಹೊಸ ಹಕ್ಕುಗಳನ್ನು ಅಳವಡಿಸಿಕೊಳ್ಳುವ ಜೀವಂತ ದಾಖಲೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಭಾ ಸ್ವಾತಂತ್ರ್ಯದ ಅರ್ಥ ಕುರಿತು ಜನರು ವಾತನಾಡಲು, ಸಂಘಟಿಸಿಕೊಳ್ಳಲು, ಅಧ್ಯಯನ ವಾಡಲು ಮತ್ತು ಅಗತ್ಯವಾದ ಹೊಸ ಹಕ್ಕುಗಳಿಗಾಗಿ ಹೋರಾಡಲು ಇರುವ ಅವಕಾಶ ಎಂದು ಹೇಳಿದರು.
ಅಂಬೇಡ್ಕರ್ ಅವರ ಜಾತಿ ವ್ಯವಸ್ಥೆಯ ಮೇಲಿನ ಕಠಿಣ ವಿಮರ್ಶೆ, ಬಹುಮತಾಧಾರಿತ ರಾಜಕಾರಣದ ವಿರುದ್ಧದ ಎಚ್ಚರಿಕೆ, ತಾರ್ಕಿಕತೆ ಮತ್ತು ಭಿನ್ನಾಭಿಪ್ರಾಯದ ಮಹತ್ವ ಇಂದಿಗೂ ಅತ್ಯಂತ ಪ್ರಸ್ತುತ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುವಾರ್, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮೈವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನರೇಂದ್ರಕುವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಂು ನಿರ್ದೇಶಕ ಎಂ.ಡಿ.ಸುದರ್ಶನ್ ಪಾಲ್ಗೊಂಡಿದ್ದರು.