ಮೈಸೂರು ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮುಲ್ ಯೂನಿಯನ್ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್ ಹಾಗೂ ಹಿರಿಯ ರಂಗಭೂಮಿ ಕಲಾವಿದ ಕೆರೆಹಳ್ಳಿ ಬಿ.ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಜಿ.ಟಿ. ದೇವೇಗೌಡ, ಶ್ರೀ ಗುರುಶಾಂತ ಸ್ವಾಮಿಜಿ, ಜಯರಾಮು, ಕೆರೆಹಳ್ಳಿ ಬಿ.ದೊರೆಸ್ವಾಮಿ ಹಾಗೂ ಇತರರು ಇದ್ದರು.
- ಮೈಸೂರಿನಲ್ಲಿ ಆಯೋಜಿಸಿದ್ದ ಪೌರಾಣಿಕ ನಾಟಕ
- ಸಾಧಕರಿಗೆ ಸನ್ಮಾನ
ಮೈಸೂರು: ರಂಗಭೂಮಿ ಕಲೆ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ ಮತ್ತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಭುಲಿಂಗಲೀಲೆ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಚಾಮುಲ್ ಯೂನಿಯನ್ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್ ಹಾಗೂ ಹಿರಿಯ ರಂಗಭೂಮಿ ಕಲಾವಿದ ಕೆರೆಹಳ್ಳಿ ಬಿ.ದೊರೆಸ್ವಾಮಿ ಅವರನ್ನು ಸನ್ಮಾನಿಸಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸಲು ರಂಗಭೂಮಿ ಪೂರಕವಾಗಿದೆ. ರಂಗಭೂಮಿ ಶ್ರೇಷ್ಠ ಕಲೆಯಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕು ಎಂದು.
ಶ್ರೀ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮಿಜಿ, ಶ್ರೀ ರಾಘವೇಂದ್ರನಗರ ಮಠದ ಶ್ರೀಗಳು, ಪ್ರಮುಖರಾದ ಜಯರಾಮು, ಕೆರೆಹಳ್ಳಿ ಬಿ.ದೊರೆಸ್ವಾಮಿ, ಬಿ.ಸಿ.ಮಹದೇವಸ್ವಾಮಿ, ರೇಖಾ, ಶಿವಕುಮಾರ್ ಹಾಗೂ ಇತರರು ಇದ್ದರು.