ಶ್ರೀ ದತ್ತಾತ್ರೇಯ ಪ್ರತಿಷ್ಠಾನ, ಕರ್ನಾಟಕ ಬಸವೇಶ್ವರ ಸಮಾಜ ಸೇವಾ ಟ್ರಸ್ಟ್‌ನಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ, ಡಾ.ರಾಮಕೃಷ್ಣ, ಎ.ಆರ್. ಮಲ್ಲರಾಜೇ ಅರಸ್ ಇತರರಿದ್ದರು. 
ಮೈಸೂರು

ಯುವಕರು ತಂತ್ರಜ್ಞಾನದ ಪ್ರಯೋಜನ ಪಡೆಯಲಿ

ಅವಿನಾಶ್ ಜೈನಹಳ್ಳಿ
ಮೈಸೂರು: ಯುವಕರು ವಿನೂತನ ತಂತ್ರಜ್ಞಾನದ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಕರೆ ನೀಡಿದರು.
ಶ್ರೀ ದತ್ತಾತ್ರೇಯ ಪ್ರತಿಷ್ಠಾನ, ಕರ್ನಾಟಕ ಬಸವೇಶ್ವರ ಸಮಾಜ ಸೇವಾ ಟ್ರಸ್ಟ್- ಧನ್ವಂತರಿ ಲೋಕಸಿರಿ ಬಯೋಟೆಕ್ ಸಹಯೋಗದಲ್ಲಿ ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಯೂತ್ ಇನ್ನೋವೇಷನ್ ಎಕ್ಸ್‌ಪೋ ಪೂರ್ವಭಾವಿ ಸಭೆ, 70ನೇ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದೆ. ಆದ್ದರಿಂದ ಯುವಕರು ತಂತ್ರಜ್ಞಾನಗಳ ಲಾಭ ಪಡೆದು ಮುಂದೆ ಬರಬೇಕು ಎಂದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಡಿ. ದೇವರಾಜ ಅರಸು ಅವರು ತಮ್ಮ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಹರಿಕಾರ ಎನಿಸಿಕೊಂಡರು. ಪ್ರತಿಯೊಬ್ಬರೂ ಕನ್ನಡದ ಜತೆಗೆ ಇಂಗ್ಲಿಷ್ ಹಾಗೂ ಹಿಂದಿಯನ್ನು ಕೂಡ ಕಲಿಯಬೇಕು ಎಂದು ಅವರು ಸಲಹೆ ಮಾಡಿದರು.
ಡಿಆರ್‌ಡಿಒ ನಿವೃತ್ತ ವಿಜ್ಞಾನಿ ಡಾ.ರಾಮಕೃಷ್ಣ ಮಾತನಾಡಿ, ಆಹಾರ, ಆರೋಗ್ಯ ಮತ್ತು ದೇಶದ ಬಗ್ಗೆ ಪ್ರೀತಿ ಮತ್ತು ಗೌರವ ಇರಬೇಕು. ಜೀವ ಮತ್ತು ಜೀವನ ಮತ್ತೆ ಸಿಗದು. ಆದ್ದರಿಂದ ಯುವಕರು ಸದುಪಯೋಗ ಮಾಡಿಕೊಂಡು ದೇಶಸೇವೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿ. ರವಿಶಂಕರ್ ಅವರ ಜತೆಗೂಡಿ ಯುವಕರಿಗೆ ವಿನೂತನ ತಂತ್ರಜ್ಞಾನ ಕುರಿತ ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸುವುದಾಗಿ ಅವರು ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮಾಜಿ ಕಾರ್ಯದರ್ಶಿ ಎ.ಆರ್. ಮಲ್ಲರಾಜೇ ಅರಸ್ ಮಾತನಾಡಿ, ವಿನೂತನ ತಂತ್ರಜ್ಞಾನ ಕಲಿಯುವವರಿಗೆ ಯಾವುದೇ ಮಿತಿ ಇಲ್ಲ. ಆದರೆ ಕಲಿಯುವ ಮನಸ್ಸು ಮಾಡಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಬೆಳಕು ಸಾಮಾಜಿಕ ಸೇವಾ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಯಾತನಹಳ್ಳಿ ಪ್ರಕಾಶ್, ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಡಾ.ಕಾವೇರಿ ಪ್ರಕಾಶ್, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಜಿ. ರವಿಶಂಕರ್, ಡಿಆರ್‌ಡಿಒ ನಿವೃತ್ತ ವಿಜ್ಞಾನಿ ಡಾ.ಎ. ರಾಮಕೃಷ್ಣ, ಯೋಗ ಶಿಕ್ಷಕ ಎಂ. ಮಲ್ಲಿಕಾರ್ಜುನಸ್ವಾಮಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಪಿ. ಪ್ರಭುಸ್ವಾಮಿ, ಧನ್ವಂತರಿ ಲೋಕಸಿರಿ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಲೋಕೇಶ್, ಜ್ಯೋತಿಷಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀದತ್ತ ಎಂಟರ್ ಪ್ರೈಸಸ್‌ನ ಮುಕ್ತಾರ್ ಅಹ್ಮದ್, ಧನ್ವಂತರಿ ಲೋಕರಿಸಿ ಬಯೋಟೆಕ್‌ನ ಲೋಕೇಶ್ ಇದ್ದರು.