ಎಚ್.ಡಿ.ಕುಮಾರಸ್ವಾಮಿ 
ಮೈಸೂರು

ಬಿಡದಿ ಟೌನ್‌ಶಿಫ್ ವಿಚಾರದಲ್ಲಿ ಹೋರಾಟ ನಿರಂತರ: ಎಚ್.ಡಿ.ಕುಮಾರಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ನಾನು ನನ್ನ ಅವಧಿಯಲ್ಲಿ ಬಿಡದಿ ಸೇರಿದಂತೆ ಐದು ಟೌನ್‌ಶಿಫ್ ಮಾಡಲು ನಿರ್ಧಾರ ಮಾಡಿದ್ದು ಸತ್ಯ
  • ಳೀಯ ರೈತರನ್ನು ಕರೆಸಿಕೊಂಡಿದ್ದೆ. ಅವರ ವಿಚಾರ ತಿಳಿದ ಮೇಲೆ ನಾನು ಆ ಪ್ರಸ್ತಾಪ ಕೈ ಬಿಟ್ಟಿದ್ದೆ.
  • ಇಲ್ಲ. ನೈಸ್ ಯೋಜನೆಯನ್ನು ದೇವೇಗೌಡರ ಕೂಸು ಎಂದರು. ಆದರೆ, ಲಾಭ ಮಾಡಿಕೊಂಡವರು ಯಾರೋ. ಬಿಡದಿ ವಿಚಾರದಲ್ಲಿ ನನ್ನ ಬಗ್ಗೆ ಏನೇ ಹೇಳಿದರೂ ರೈತರ ಭೂಮಿ ಲೂಟಿ ಮಾಡಲು ನಾನು ಬಿಡಲ್ಲ
  • ಮುಂದಿನ ಸದನದಲ್ಲಿ ದಾಖಲೆ ಬಿಡುಗಡೆ
ಮೈಸೂರು: ಬಿಡದಿ ಟೌನ್‌ಶಿಫ್ ವಿಚಾರದಲ್ಲಿ ನನ್ನ ಹೋರಾಟ ನಿರಂತರ. ಕಾನೂನಾತ್ಮಕ ಹೋರಾಟ, ರೈತರ ಜತೆಯೂ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ನನ್ನ ಅವಧಿಯಲ್ಲಿ ಬಿಡದಿ ಸೇರಿದಂತೆ ಐದು ಟೌನ್‌ಶಿಫ್ ಮಾಡಲು ನಿರ್ಧಾರ ಮಾಡಿದ್ದು ಸತ್ಯ. ಆ ವೇಳೆ ಅದರ ಬಗ್ಗೆ ಚರ್ಚೆಗಾಗಿ ಸ್ಥಳೀಯ ರೈತರನ್ನು ಕರೆಸಿಕೊಂಡಿದ್ದೆ. ಅವರ ವಿಚಾರ ತಿಳಿದ ಮೇಲೆ ನಾನು ಆ ಪ್ರಸ್ತಾಪ ಕೈ ಬಿಟ್ಟಿದ್ದೆ.  ಈಗ ಅದು ನನ್ನ ಕೂಸು ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನಗೆ ಏನೂ ಬೇಸರ ಇಲ್ಲ. ನೈಸ್ ಯೋಜನೆಯನ್ನು ದೇವೇಗೌಡರ ಕೂಸು ಎಂದರು. ಆದರೆ, ಲಾಭ ಮಾಡಿಕೊಂಡವರು ಯಾರೋ. ಬಿಡದಿ ವಿಚಾರದಲ್ಲಿ ನನ್ನ ಬಗ್ಗೆ ಏನೇ ಹೇಳಿದರೂ ರೈತರ ಭೂಮಿ ಲೂಟಿ ಮಾಡಲು ನಾನು ಬಿಡಲ್ಲ. ಮುಂದಿನ ಸದನದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ತಿರುಗೇಟುಕೊಟ್ಟರು
ನಮ್ಮ ಶಾಸಕರಿಗೆ ದುಡ್ಡು ಮಾಡಿಕೊಡಲು ಈ ಹಿಂದೆ ಕೆಲವರಿಗೆ ವಿಧಾನ ಪರಿಷತ್ ಹಾಗೂ ವಿಧಾನಸಭೆಗೆ ಟಿಕೆಟ್ ಕೊಟ್ಟಿದ್ದೇನೆ. ಅವರಿಂದ ಪಕ್ಷಕ್ಕೆ ದೇಣಿಗೆಯನ್ನೂ ಪಡೆದುಕೊಂಡಿದ್ದು, ವೈಯಕ್ತಿಕ ಲಾಭಕ್ಕಾಗಿ ನಾನು ಯಾವತ್ತು ಪಕ್ಷದ ಟಿಕೆಟ್ ಮಾರಿಕೊಂಡಿಲ್ಲ. ನಾನು ಸಿಎಂ ಆಗದಾಗ ನಾನು ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. 
ಈಗ ಕೇಂದ್ರ ಸಚಿವನಾಗಿಯೂ  ತನ್ನ ಸಹಿಯನ್ನು ಮಾರಾಟ ಮಾಡುತ್ತಿಲ್ಲ. ನನ್ನ ಹಳೆಯ ಸ್ನೇಹಿತರು ಏನೇನೊ ಮಾತನಾಡುತ್ತಿದ್ದು, ಮಾತಾಡಲ್ಲಿ. ಪ್ಲೇ ವಿನ್ ಲಾಟರಿ ನಿಷೇಧ ವೇಳೆ ನನಗೆ ಕೋಟ್ಯಂತರ ರೂ. ಆಫರ್ ಬಂದಿತ್ತು. ಹೋಟೆಲ್‌ನಲ್ಲೇ ಹಣ ತಂದಿಟ್ಟುಕೊಂಡಿದ್ದರು. ಅದನ್ನು ಧಿಕ್ಕರಿಸದವನು ನಾನು ಎಂದು ಹೇಳಿದರು.
ರಾಷ್ಟ್ರ ರಾಜಕಾರಣದಲ್ಲಿ ಇರುವುದು ತಾತ್ಕಾಲಿಕ. ನನಗೆ ರಾಜ್ಯ ರಾಜಕಾರಣವೇ ಶಾಶ್ವತ. ರಾಜ್ಯ ರಾಜಕಾರಣಕ್ಕೆ ಹೊಸದಾಗಿ ಏನು ಬರಬೇಕಾಗಿಲ್ಲ. ನಮ್ಮ ಪಕ್ಷಕ್ಕೆ ನಾನೇ ಅಧ್ಯಕ್ಷ ಅಲ್ಲವೇ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆಯ ಬಗ್ಗೆ ರಬ್ಬಿಶ್ ಎಂದು ಹೇಳಿರುವ ಕುರಿತು ಲೇವಡಿ ಮಾಡಿದ ಎಚ್‌ಡಿಕೆ, ನಾನು ಹೇಳಿದ್ದು ಹಾಗಿರಲಿ, ನಾನು ಹೇಳಿದ್ದನ್ನೇ ಜನರೂ ಹೇಳುತ್ತಿದ್ದಾರಲ್ಲ, ಅದಕ್ಕೆ ಏನು ಹೇಳುತ್ತೀರಿ? ಅದರಲ್ಲಿ ನಾನೇನು ತಪ್ಪು ಹೇಳಿದ್ದೇನೆ? ಇದ್ದಿದ್ದನ್ನು ಹೇಳಿದ್ದೇನೆ ಅಲ್ಲವೇ? ಎಂದು ಕುಟುಕಿದರು.