ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ 
ಮೈಸೂರು

ತಿ.ನರಸೀಪುರದ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ: ಡಾ.ಯತೀಂದ್ರ

ಪ್ರಮುಖ ಮುಖ್ಯಾಂಶಗಳು

  • ನಾವು ಏಕೆ ಕಾರ್ಖಾನೆ ಮುಚ್ಚುತ್ತೇವೆ. ಸುಮ್ಮನೆ ಕೆಲವರು ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದಾರೆ
  • ವರದಿಯನ್ನು ಕ್ರೀಡಾಂಗಣ ಸ್ಥಾಪನೆಯಿಂದ ತೊಂದರೆ ಎಂದು ಬಂದರೆ, ಕ್ರೀಡಾಂಗಣಕ್ಕೆ ಬೇರೆ ಜಾಗ ಹುಡುಕಲಾಗುತ್ತದೆ.
 ಮೈಸೂರು: ತಿ.ನರಸೀಪುರದಲ್ಲಿರುವ ಕೆಎಸ್‌ಐಸಿಯ ರೇಷ್ಮೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರೇಷ್ಮೆ ಕಾರ್ಖಾನೆಯಲ್ಲಿ ನಮ್ಮ ವರುಣ ಕ್ಷೇತ್ರದ ಜನರೇ ಕೆಲಸ ಮಾಡುತ್ತಿದ್ದಾರೆ. ನಾವು ಏಕೆ ಕಾರ್ಖಾನೆ ಮುಚ್ಚುತ್ತೇವೆ. ಸುಮ್ಮನೆ ಕೆಲವರು ಸುಳ್ಳು ಹೇಳಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಶನಿವಾರ ನಗರದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಅಧಿಕಾರಿಗಳಿಂದ ಈ ವಿಚಾರಲ್ಲಿ ತಾಂತ್ರಿಕ ವರದಿ ಕೇಳಿದ್ದು, ವರದಿಯನ್ನು ಕ್ರೀಡಾಂಗಣ ಸ್ಥಾಪನೆಯಿಂದ ತೊಂದರೆ ಎಂದು ಬಂದರೆ, ಕ್ರೀಡಾಂಗಣಕ್ಕೆ ಬೇರೆ ಜಾಗ ಹುಡುಕಲಾಗುತ್ತದೆ. 
ನಮಗೆ ಕಾರ್ಖಾನೆಯೂ ಮುಖ್ಯ, ಜತೆಗೆ, ಕ್ರೀಡಾಂಗಣವೂ ಮುಖ್ಯ. ಕ್ರೀಡಾಂಗಣಕ್ಕಾಗಿ ಕಾರ್ಖಾನೆಯನ್ನೂ ಎಂದಿಗೂ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.