ನಗರದ ಅನಾಥಾಲಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಉಪನ್ಯಾಸದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಲಾಯಿತು. ಸಿ.ವಿ.ಗೋಪಿನಾಥ್, ಎನ್.ವಿ.ದಿನೇಶ್, ಎಚ್.ಅಶ್ವಥ್ ನಾರಾಯಣ, ಎಸ್.ಮುರಳಿ ಇನ್ನಿತರರಿದ್ದರು. 
ಮೈಸೂರು

ಬಾಲರಾಮನ ವಿಗ್ರಹ ಕೆತ್ತನೆ ಶಿಲ್ಪಕಲೆಗೆ ದೊರೆತ ಗೌರವ

ಪ್ರಮುಖ ಮುಖ್ಯಾಂಶಗಳು

  • ಶಿಲ್ಪಿ ಅರುಣ್ ಯೋಗಿರಾಜ್ ಅಭಿಮತ ಉಪನ್ಯಾಸ ಕಾರ್ಯಕ್ರಮ
  • ಒಬ್ಬ ಶಿಲ್ಪಿಯಾಗಿ ಅಲ್ಲ. ಭಕ್ತನಾಗಿ ಕೆತ್ತನೆ ಮಾಡಿರುವೆ
ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನ ವಿಗ್ರಹ ಕೆತ್ತನೆ ಕೆಲಸ ಬಹಳ ಸವಾಲಿನಿಂದ ಕೂಡಿತ್ತು ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.
ತಾತಯ್ಯ ಸ್ಮಾರಕ ಉಪನ್ಯಾಸ ವಾಲೆಯ ಅಂಗವಾಗಿ ನಗರದ ನಾರಾಯಣಶಾಸಿ ರಸ್ತೆಯಲ್ಲಿರುವ ಅನಾಥಾಲಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಉಪನ್ಯಾಸದಲ್ಲಿ ಅಯೋಧ್ಯೆ ರಾಮಮಂದಿರ ಬಲರಾಮನ ವಿಗ್ರಹದ ಕೆತ್ತನೆಯ ತಮ್ಮ ಅನುಭವವನ್ನು ಹಂಚಿಕೊಂಡರು.
ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ದೊರೆತ ಕಲ್ಲಿನಿಂದ ಮೂರ್ತಿ ಕೆತ್ತಿದೆ. 7 ತಿಂಗಳ ಕಾಲ ಶ್ರದ್ಧೆಯಿಂದ ಮಾಡಿದ ಕಾಯಕದ ಫಲ. ಕಲೆಯ ಮೂಲಕ ದೇಶದ ಜನರನ್ನು ತಲುಪಿರುವೆ. ಇದು ಶಿಲ್ಪಕಲೆಗೆ ದೊರೆತ ಗೌರವ ಎಂದರು.
ದೇಶದ ಜನರು ಸಹ ಇಷ್ಟಪಡಬೇಕು. ಹಾಗೆ ಮೂರ್ತಿಯನ್ನು ಕೆತ್ತಬೇಕು. ಈ ರೀತಿಯ ಆಲೋಚನೆ ಮಾಡಿಕೊಂಡು ಕೆಲಸ ಕೈಗೊಂಡಿದ್ದೆ. ಕಣ್ಣು ಮತ್ತು ಮುಗ್ಧತೆಯಿಂದಲೇ ಬಾಲರಾಮ ಕಣ್ಮನ ಸೆಳೆಯಿತು. ಅಲ್ಲಿಯ ಜಾಗದ ಮಹಿಮೆ, ಅಲಂಕಾರ, ವಿಧಿವಿಧಾನ, ಸಕಾರಾತ್ಮಕ ಶಕ್ತಿಯಿಂದ ಮೂರ್ತಿ ಮಗುವಿನ ರೂಪಕ್ಕೆ ಬದಲಾಯಿತು ಎಂದು ಹೇಳಿದರು.
ರಾಮನ ಬಾಲ ಸ್ವರೂಪ ನಾವು ನೋಡಿರಲಿಲ್ಲ. ಆದರೆ, ಜನರ ಮನಸ್ಸಿಗೆ ಮುಟ್ಟುವಂತೆ ಮೂರ್ತಿ ಸೃಷ್ಟಿಸಬೇಕಿತ್ತು. ಹೇಗೆ ಸ್ವೀಕಾರ ವಾಡುತ್ತಾರೆ ಎನ್ನುವ ಭಯವಿತ್ತು. ಇದನ್ನು ಒಬ್ಬ ಶಿಲ್ಪಿಯಾಗಿ ಅಲ್ಲ. ಭಕ್ತನಾಗಿ ಕೆತ್ತನೆ ವಾಡಿರುವೆ ಎಂದರು.
ಅನಾಥಾಲಯ ಅಧ್ಯಕ್ಷ ಸಿ.ವಿ.ಗೋಪಿನಾಥ್, ಉಪಾಧ್ಯಕ್ಷ ಎನ್.ವಿ.ದಿನೇಶ್, ಕಾರ್ಯದರ್ಶಿ ಎಚ್.ಅಶ್ವಥ್ ನಾರಾಯಣ, ಸಮನ್ವಯಕಾರ ಎಸ್.ಮುರಳಿ ಇದ್ದರು.