ತಿ.ನರಸೀಪುರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆ.ಎನ್.ಪ್ರಭುಸ್ವಾಮಿ, ಕಿರಗಸೂರು ಶಂಕರ್, ಮಹದೇವಸ್ವಾಮಿ, ಮೂಗೂರು ಕುಮಾರಸ್ವಾಮಿ, ಸೋಸಲೆ ರಾಜಶೇಖರಮೂರ್ತಿ, ಶ್ರೀನಿವಾಸ್ ಇತರರು ಇದ್ದರು.
- ಕೆ.ಎನ್.ಪ್ರಭುಸ್ವಾಮಿ ಬಣ್ಣನೆ
- ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ
ತಿ.ನರಸೀಪುರ: ಸಂಸ್ಥಾನಗಳ ಆಳ್ವಿಕೆಯ ಕಾಲದಲ್ಲಿಯೇ ರಾಜಪ್ರಭುತ್ವದೊಳಗೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಪ್ರಗತಿಪರ ಚಿಂತಕರ ವೇದಿಕೆ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಮುನ್ನುಡಿಯಾದ ಮೈಸೂರು ಸಂಸ್ಥಾನದ ದೊರೆಯಾಗಿ ನಾಡಿನ ಸಮಗ್ರ ಅಭಿವೃದ್ಧಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಉತ್ಪಾದನೆ ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಆರಂಭಿಸಿ, ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿದರು. ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರಮೂರ್ತಿ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಶ್ರೀನಿವಾಸ್, ಗ್ರಾ.ಪಂ.ಮಾಜಿ ಅಧ್ಯಕ್ಷ ಬನ್ನಹಳ್ಳಿಹುಂಡಿ ಶಿವಕುಮಾರ್, ಮಾಜಿ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಮುಖಂಡರಾದ ಆಲಗೂಡು ಮಂಜು, ಬಸವರಾಜು, ಕರೋಹಟ್ಟಿ ಪುಟ್ಟಸ್ವಾಮಿ, ಹಿರಿಯೂರು ವಿರೂಪಾಕ್ಷ, ನಿಲಸೋಗೆ ಬಸವರಾಜು, ಹ್ಯಾಕನೂರು ಹರೀಶ್, ಕನ್ನಹಳ್ಳಿ ಮಹದೇವ, ಸೋಸಲೆ ರಾಜಣ್ಣ, ತಿರುಮಕೂಡಲು ಜಯಚಂದ್ರ, ಲ್ಯಾಂಡ್ರಿ ಸಿದ್ದರಾಜು, ಮಹೇಂದ್ರ ಕುಮಾರ್, ಕಾರ್ಗಳ್ಳಿ ಶಿವು ಮತ್ತಿತರರು ಇದ್ದರು.