ಕೊಪ್ಪ ಆವರ್ತಿ ಮುಖ್ಯ ಸರ್ಕಲ್ ಆವರಣದಲ್ಲಿ ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಸ್ಥಳೀಯರು ಪುಷ್ಪಾರ್ಚನೆ ಮಾಡಿದರು.ರಾಜು, ಮಹಾಲಿಂಗ ಸ್ವಾಮಿ. ಕುಮಾರ್, ಉಮೇಶ್ ಚಂದ್ರನ್, ವಿಜಯಕುಮಾರ್, ಇದ್ದರು. 
ಮೈಸೂರು

ಜೇಬಿಗಿಂತಲೂ ಜೋಳಿಗೆಯ ತಾಕತ್ತು ದೊಡ್ಡದು

ಪ್ರಮುಖ ಮುಖ್ಯಾಂಶಗಳು

  • ಸ್ಥಳೀಯ ನಿವಾಸಿ ಮಹಾಲಿಂಗಸ್ವಾಮಿ ಹೇಳಿಕೆ
  • ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ, ಆವರ್ತಿ ಮುಖ್ಯ ರಸ್ತೆ ಸರ್ಕಲ್ ಆವರಣದಲ್ಲಿ ಸ್ಥಳೀಯ ಸುತ್ತಮುತ್ತಲಿನ ಅಂಗಡಿ ಮುಂಗಟ್ಟಿನ ಯುವಕರು ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪುಣ್ಯ ಸ್ಮರಣೆ ಮಾಡಿದರು.
ಸ್ಥಳೀಯ ನಿವಾಸಿ ಮಹಾಲಿಂಗಸ್ವಾಮಿ ಮಾತನಾಡಿ, ಜೇಬಿಗಿಂತಲೂ ಜೋಳಿಗೆಯ ತಾಕತ್ತು. ದೊಡ್ಡದು ಎಂಬ ಸಂದೇಶವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಜೇಬು ವೈಯಕ್ತಿಕ, ಜೋಳಿಗೆ ಸಾರ್ವತ್ರಿಕ, ಜೇಬು ದಾನವಾಗುತ್ತಿದೆ. ಜೋಳಿಗೆ ದಾಸೋಹವಾಗುತ್ತಿದೆ ಎಂದು ಮೊದಲ ಬಾರಿಗೆ ಸಾರಿ ಹೇಳಿದವರು ಪೂಜ್ಯ ಡಾ ಶಿವಕುಮಾರ ಮಹಾಸ್ವಾಮಿಗಳು ಎಂದು ಸ್ಮರಿಸಿದರು.
ಜೀವನ ಉದ್ದಕ್ಕೂ ಹಿಡಿದ ಜೋಳಿಗೆ ಹಳ್ಳಿಯಿಂದ ಪಟ್ಟಣಕ್ಕೆ ವ್ಯಾಸಂಗ ಮಾಡಲು ಬಂದ ಲಕ್ಷಾಂತರ ಮಕ್ಕಳನ್ನು ಸಾಕಿದೆ. ವಿದ್ಯಾದಾನ ಮಾಡಿ ಸಲುಹಿತು ಎಂದು ತಿಳಿಸಿದರು. ಸರ್ಕಲ್ ಆವರಣದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಪ್ರಸಾದ ನಿಯೋಜಿಸಿದರು.
ರಾಜು ಆವರ್ತಿ, ಉಮೇಶ್, ಕುಮಾರ್, ಸೋಮಣ್ಣ. ಸಂತೋಷ್. ಮಂಜು. ಚಂದ್ರನ್. ವಸಂತಕುಮಾರ್. ವಿಜಯಕುಮಾರ್ . ಮಂಜುನಾಥ್ ಇತರರು ಇದ್ದರು.