ಇಡ್ತಲೆ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಮಜ್ಜನ ಚಿತ್ರ ತಂಡದ ಮೋಹರ್ತಕ್ಕೆ ಗಣ್ಯರು ಕ್ಯಾಪ್ ಮಾಡಿದರು. ಪ್ರಮೋದ್. ಈಶ್ವರ್ ಸುರೇಶ್. ರವಿಕುಮಾರ್ ಕಪ್ಪಸೋಗೆ .
ನಂಜನಗೂಡ: ತಾಲೂಕಿನ ಐತಿಹಾಸಿಕ ಹೆಡತಲೆ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ’ಮಜ್ಜನ’ ಚಿತ್ರದ ಮುಹೂರ್ತ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
’ಮಜ್ಜನ’ ಚಿತ್ರವು ಮಲೆ ಮಹದೇಶ್ವರ ಸ್ವಾಮಿಯ ಪವಾಡ, ಮಹಿಮೆ ಆಧಾರಿತ ಗ್ರಾಮೀಣ ಭಾಗದ ಕಥಾ ವಸ್ತುವನ್ನು ಹೊಂದಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನಲ್ಲಿ ಮೂಡಿಬರಲಿರುವ ಈ ಚಿತ್ರ ಉತ್ತಮ ಕಥೆಯೊಂದಿಗೆ ಪ್ರೇಕ್ಷಕರ ಮನ ಗೆಲ್ಲುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಚಿತ್ರದ ಕುರಿತು ಮಾಹಿತಿ ನೀಡಿದ ನಾಯಕ ನಟ ಸೋಮಶೇಖರ, ಸುಮಾರು ಒಂದು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಗ್ರಾಮೀಣ ಭಾಗದಲ್ಲಿಯೇ ನಡೆಸಲು ತೀರ್ಮಾನಿಸಿದ್ದೇವೆ. 35 ರಿಂದ 40 ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಮಹದೇಶ್ವರ ಸ್ವಾಮಿಯ ಆಶೀರ್ವಾದದೊಂದಿಗೆ ಆರಂಭವಾದ ’ಮಜ್ಜನ’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ ಎಂದರು.
ನಿರ್ಮಾಪಕ ಪ್ರಮೋದ್. ಈಶ್ವರ್ ಸುರೇಶ್. ರವಿಕುಮಾರ್ ಕಪ್ಪಸೋಗೆ .ಹೆಡತಲೆ ರಾಜು ತಮ್ಮನಾಯಕ. ಗಡಿ ಯಜಮಾನ ಮಾದನಾಯಕ.ಗ್ರಾಮದ ಮುಖಂಡರು, ಸಹ ಕಲಾವಿದರು, ಛಾಯಾಗ್ರಾಹಕರು ಹಾಗೂ ಸಾಹಸ ಕಲಾವಿದರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.