ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ನಗರಲ್ಲಿ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ 81ನೇ ಜಯಂತೋತ್ಸವ ಸ್ಮರಣೆ ಆಚರಿಸಲಾಯಿತು. ಸಿ.ಜಿ.ಗಂಗಾಧರ್, ಎಂ.ಬಿ. ಮಂಜೇಗೌಡ, ಗೋವಿಂದೇಗೌಡ, ತೇಜೇಶ್‌ಲೋಕೇಶ್‌ಗೌಡ, ಸುಬ್ಬೇಗೌಡ, ಎಸ್.ಜಯಪ್ರಕಾಶ್ , ರಘುರಾಂ ಕೆ. ವಾಜಪೇಯಿ, ಲಕ್ಷ್ಮೀದೇವಿ, ಭಾಗ್ಯಮ್ಮ ಇತತರು ಇದ್ದರು.
- ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಎಲ್ಲ ವರ್ಗದ, ಸಮುದಾಯದ, ಬಡ ಜನರ ಸೇವೆ
- ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಅನೇಕರ ಬಾಳಿಗೆ ದಾರಿ ದೀಪ
ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ನಗರದ ಮಾಧವರಾವ್ (ಅಗ್ರಹಾರ) ವೃತ್ತದಲ್ಲಿ ಆದಿಚುಂಚನಗಿರಿ ಮಠದ ಭೈರವೈಕ್ಯ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ 81ನೇ ಜಯಂತೋತ್ಸವ ಸ್ಮರಣೆ ಆಚರಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್ ಪುಷ್ಪಾರ್ಚನೆ ಮಾಡಿ ಮಾತನಾಡಿ, ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಎಲ್ಲ ವರ್ಗದ, ಸಮುದಾಯದ, ಬಡ ಜನರ ಸೇವೆಯನ್ನು ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದವರು ಎಂದು ಬಣ್ಣಿಸಿದರು.
ಶ್ರೀರಾಮ ಜನ್ಮಭೂಮಿಗೆ ಬಹಳ ಹೋರಾಟದಲ್ಲೂ ಭಾಗವಹಿಸಿದ್ದಲ್ಲದೇ ತಿ,ನರಸೀಪುರದ ಕುಂಭಮೇಳ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ನಾಂದಿಯಾಡಿದ್ದರು. ರಾಜ್ಯದಲ್ಲಿ ಸುಮಾರು 554ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ನಡೆಸಿ ಅನೇಕ ಬಾಳಿಗೆ ದಾರಿ ದೀಪವಾಗಿದ್ದರು. ಅವರ ಆದರ್ಶವನ್ನು ಪಾಲಿಸಬೇಕು ಎಂದರು.
ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್ ಮಾತನಾಡಿ, ಶ್ರೀಗಳು ದೇಶ ಕಂಡ ಅಪ್ರತಿಮ ಸಂತ. ರಾಜ್ಯದಲ್ಲಿ ಹಿಂದೂತ್ವದ ಬಗ್ಗೆ ಬಹಳಷ್ಟು ಪ್ರಚಾರ ಮಾಡಿ ಅನೇಕ ಸಂಘಟನೆಗಳಲ್ಲಿ ತೊಡಗಿದ್ದರು. ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶ್ರೀಗಳು ಹಾಗೂ ಪೇಜಾವರ ಶ್ರೀಗಳು ದೊಡ್ಡ ಹಿಂದೂತ್ವದ ಸಮಾವೇಶ ಮಾಡಿ ದೇಶದ ಗಮನ ಸೆಳೆದರು. ಇವರೆಲ್ಲರ ಹೋರಾಟದ ಫಲದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಶ್ರೀಗಳ ಜೀವನ ಚರಿತ್ರೆಯನ್ನು ಪಠ್ಯಗಳಲ್ಲಿ ಅಳವಡಿಸಬೇಕು ಎಂದು ಹೇಳಿದರು.
ಹಿರಿಯ ಸಂಸ್ಕೃತಿ ಪೋಷಕ ರಘುರಾಂ ಕೆ. ವಾಜಪೇಯಿ ಸಿಹಿ ವಿತರಣೆ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಗೋವಿಂದೇಗೌಡ, ಜಿಲ್ಲಾಧ್ಯಕ್ಷ ತೇಜೇಶ್‌ಲೋಕೇಶ್‌ಗೌಡ, ಸಂಘಟನೆಯ ಗಣೇಶ್, ಲಕ್ಷ್ಮೀದೇವಿ, ಶಿವಲಿಂಗಯ್ಯ, ಚರಣ್ ರಾಜ್ , ಯಶ್ವಂತ್‌ಕುಮಾರ್, ನೇಹಾ, ಶೋಭಾ ರಾಣಿಗೌಡ, ಭಾಗ್ಯಮ್ಮ, ಮೊಗಣ್ಣಾಚಾರ್, ಹನುಮಂತಯ್ಯ, ಸುಜಾತಾ, ಸುಬ್ಬೇಗೌಡ , ಆನಂದ್‌ಗೌಡ, ಪ್ರದೀಪ್, ದರ್ಶನ್ ಗೌಡ, ಅಶೋಕ್, ರಘು ಅರಸ್,ಪ್ರಭಾಕರ್ , ರವೀಶ್, ರವಿ ನಾಯಕ್, ರಘು ಆಚಾರ್, ಮಹೇಶ್, ಪರಿಸರ ಚಂದ್ರು, ಚಂದ್ರಶೇಖರ್, ಸ್ವಾಮಿ, ನಾರಾಯಣಗೌಡ ಇನ್ನಿತರರು ಇದ್ದರು.