ಅಲೆಯನ್ಸ್ ಪ್ರಿನ್ಸ್, ಐಕ್ಯ, ನಿಧಿ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಎಚ್.ಎಸ್.ಸವಿತಾ ಉದ್ಘಾಟಿಸಿದರು. ಎಸ್.ವೆಂಕಟೇಶ್, ಅಂಶಿ ಪ್ರಸನ್ನಕುಮಾರ್, ಮಹಾಬಲೇಶ್ವರ ಬೈರಿ, ಎನ್. ಬೆಟ್ಟೇಗೌಡ, ಗಣೇಶ್, ಕಸ್ತೂರಿ ಚಂದ್ರು, ಪಲ್ಲವಿ, ಅನುಪಮಾ ಇತರರಿದ್ದರು.
- ಕನ್ನಡ ಭಾಷಾ ಸಂಪತ್ತಿನ ಕುರಿತು ವಿದೇಶಿಗರು ಅಧ್ಯಯನ ಮಾಡುತ್ತಾರೆ
- ಕನ್ನಡಿಗರೇ ಕನ್ನಡ ಭಾಷೆಯ ಕುರಿತು ತಾತ್ಸಾರ ತೋರುತ್ತಿದ್ದಾರೆ
ಮೈಸೂರು: ಕನ್ನಡದ ಮಹತ್ವದ ಬಗ್ಗೆ ವಿದೇಶಿಯರು ಬಂದು ತಿಳಿದುಕೊಂಡು ಹೆಮ್ಮೆ ಪಡುತ್ತಿದ್ದಾರೆ. ಆದರೆ ನಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಸುತ್ತಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ವಿಷಾದಿಸಿದರು.
ಅಲೆಯನ್ಸ್ ಪ್ರಿನ್ಸ್, ಐಕ್ಯ, ನಿಧಿ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಬೆಳಗೊಳ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ಭಾಷೆಯ ಮಹತ್ವ, ಅದರ ಪ್ರಾಮುಖ್ಯ, ಭಾಷಾ ಸಂಪತ್ತಿನ ಕುರಿತು ವಿದೇಶಿಗರು ಅಧ್ಯಯನ ಮಾಡುತ್ತಾರೆ. ಆದರೆ ಕನ್ನಡಿಗರೇ ಕನ್ನಡ ಭಾಷೆಯ ಕುರಿತು ತಾತ್ಸಾರ ತೋರುತ್ತಿದ್ದಾರೆ. ಆದ್ದರಿಂದ ನಮ್ಮ ಮಕ್ಕಳಿಗೆ ಕನ್ನಡ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ. ಮುಂದಾದರೂ ಕನ್ನಡ ಭಾಷೆಯ ಬಗ್ಗೆ ತಿಳಿಸಿಕೊಟ್ಟು ಅದನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಲೆಯನ್ಸ್ ಜಿಲ್ಲಾ ರಾಜ್ಯಪಾಲ ಎಸ್.ವೆಂಕಟೇಶ್ ಮಾತನಾಡಿ, ನಮ್ಮ ಕ್ಲಬ್ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಮೈಸೂರು ಸುತ್ತಮುತ್ತ ಇರುವ ಗ್ರಾಮೀಣ ಪ್ರದೇಶಗಳಲ್ಲೂ ಶಿಕ್ಷಣ ಹಾಗೂ ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡುತ್ತಿದೆ ಎಂದರು.
ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದೆ. ಆದ್ದರಿಂದ ಈ ಎರಡರ ಬಗ್ಗೆ ಗಮನಹರಿಸಬೇಕು. ಎಷ್ಟೇ ಕಷ್ಟವಾದರೂ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ಬೆಳಗೊಳ ಗ್ರಾಪಂ ಅಧ್ಯಕ್ಷೆ ಎಚ್.ಎಸ್.ಸವಿತಾ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಲೆಯನ್ಸ್ ಕ್ಲಬ್ ಒಂದನೇ ರಾಜ್ಯಪಾಲ ಮಹಾಬಲೇಶ್ವರ ಬೈರಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎನ್. ಬೆಟ್ಟೇಗೌಡ, ಜಿಲ್ಲಾ ಅಂಬಾಸಿಡರ್ ಗಣೇಶ್, ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷ ಕಸ್ತೂರಿ ಚಂದ್ರು, ಗ್ರಾಪಂ ಉಪಾಧ್ಯಕ್ಷೆ ಪಲ್ಲವಿ, ಮುಖಂಡರಾದ ಬಿ.ಎಂ.ಸ್ವಾಮಿಗೌಡ, ಇಂದಿರಾ ವೆಂಕಟೇಶ್, ಶ್ರೀನಿವಾಸಗೌಡ, ಡಿ. ವಿಷಕಂಠೇಗೌಡ, ಸರಸ್ವತಿ, ಲಕ್ಷ್ಮೀ, ಮಂಜುಳಾ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೆ.ಟಿ.ರಂಗಪ್ಪ, ಪ್ರಿನ್ಸ್ ಕ್ಲಬ್ ಅಧ್ಯಕ್ಷ ಎಸ್.ಎ.ಪುಟ್ಟಸ್ವಾಮಿ, ಐಕ್ಯ ಕ್ಲಬ್ ಕಾರ್ಯದರ್ಶಿ ಬಿ.ಎಸ್.ಅನುಪಮಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಬಿ.ವಿ.ಸುರೇಶ್, ಬಿ.ರವಿಕುಮಾರ್, ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ವಿ.ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಡಿ.ಮಹದೇವು, ಗ್ರಾಪಂ ಸದಸ್ಯ ಆರ‌್ಮುಗಂ, ಮಾಜಿ ಸದಸ್ಯ ಬಿ.ಎನ್.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಅನನ್ಯ ಹಾರ್ಟ್ ಸಂಸ್ಥೆ, ಭಗವಾನ್ ಮಹಾವೀರ ದರ್ಶನ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.