ಉದ್ಯೋಗ 
ಮೈಸೂರು

ಕನ್ನಡಿಗರ ಉದ್ಯೋಗ ಭದ್ರತೆಗೆ ಸರ್ಕಾರ ಗಮನಹರಿಸಲಿ

ಮೈಸೂರು: ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ವಲಸಿಗರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಮನೆ ಹಂಚಿಕೆ ಮಾಡುತ್ತೇವೆ ಎಂಬ ಸರ್ಕಾರದ ನಿರ್ಧಾರ ಸರಿಯಲ್ಲ. ಬದಲಾಗಿ ಇಲ್ಲಿಯೇ ನಿರ್ವಸತಿಗರಾಗಿರುವ ಕನ್ನಡಿಗರಿಗೆ ಸರ್ಕಾರ ಆದ್ಯತೆ ನೀಡಲಿ ಎಂದು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಗಿರೀಶ್ ಶಿವಾರ್ಚಕ ಆಗ್ರಹಿಸಿದರು.
ಹೊರ ರಾಜ್ಯಗಳಿಂದ ಬಂದವರು ಬೆಂಗಳೂರಿನಲ್ಲಿ ಆಟೋರಿಕ್ಷಾ, ಕಾರು ಚಾಲಕರಾಗಿ, ಹೋಟೆಲ್‌ಗಳಿಂದ ಹಿಡಿದು ಕಟ್ಟಡ ನಿರ್ಮಾಣ, ಕಾರ್ಖಾನೆ, ಭದ್ರತಾ ಸಂಸ್ಥೆ, ಬೀದಿ ಬದಿ ವ್ಯಾಪಾರ ಮೊದಲಾದವುಗಳಲ್ಲಿ ಸಿಂಹಪಾಲು ಉದ್ಯೋಗ ತಮ್ಮದಾಗಿಸಿಕೊಂಡಿದ್ದಾರೆ. ಇದರಿಂದಾಗಿ ಕನ್ನಡಿಗರ ಉದ್ಯೋಗಕ್ಕೆ ಕುತ್ತು ಬಂದಿದೆ. ಹೀಗಾಗಿ ಸರ್ಕಾರ ಕನ್ನಡಿಗರ ಉದ್ಯೋಗ ಭದ್ರತೆಯತ್ತ ಗಮನ ಹರಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪ್ರಕಾಶ್, ಕುಮಾರ್ ರಾಜೇ ಅರಸ್, ಸಂತೋಷ್, ಸಚಿನ್ ದೀಕ್ಷಿತ್, ಕೃಷ್ಣಮೂರ್ತಿ, ಧನಂಜಯ್ ಇದ್ದರು.