9ಊಓ1: ಹುಣಸೂರು ತಾಲೂಕು ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಅಶೋಕ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ಮೋಹನ್ ಕುಮಾರ್, ಚೆನ್ನವೀರಪ್ಪ, ಶೋಭಾ ಬಸವರಾಜು, ಗಿರಿಜಾಂಬಿಕಾ, ಜೆ.ಜಗದೀಶ್ ಇದ್ದರು.
- ಅಧ್ಯಕ್ಷ ದಿವ್ಯಾ ಅಶೋಕ್ ಅಭಿಪ್ರಾಯ
ಹುಣಸೂರು: ಸರ್ಕಾರಿ ಶಾಲೆಗಳಲ್ಲಿ ಆಯೋಜನೆಗೊಳ್ಳುತ್ತಿರುವ ಕಲಿಕಾ ಹಬ್ಬ, ಪ್ರತಿಭಾ ಕಾರಂಜಿ ಮುಂತಾದವು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಇರುವ ಉತ್ತಮ ವೇದಿಕೆಗಳಾಗಿವೆ ಎಂದು ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವ್ಯಾ ಅಶೋಕ್ ಅಭಿಪ್ರಾಯಪಟ್ಟರು.
ತಾಲೂಕಿನ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿವೆ. ಎನ್ನುವ ಮಾತಿನ ನಡುವೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುತ್ತಿವೆ. ಇದು ಬಡಪಾಲಕರ ಮನಸಿಗೆ ನೆಮ್ಮದಿ ತಂದಿದೆ ಎಂದರು.
ಮುಳ್ಳೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ್ ಮಾತನಾಡಿ, ಪ್ರತಿಭೆ ಮತ್ತು ಕಲಿಕೆ ಯಾರ ಸ್ವತ್ತಲ್ಲ, ಅದು ಪ್ರತಿಯೊಂದು ಮಗುವಿನಲ್ಲೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಇಂತಹ ಉತ್ತಮವಾದ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮತ್ತು ಗುಣಾತ್ಮಕ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಲ್ಲ ಶಾಲೆಗಳ ಒಟ್ಟು 73 ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಗೆದ್ದಂತಹ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಖ್ಯಶಿಕ್ಷಕ ಮೋಹನಕುಮಾರ, ಮಹಾಲಕ್ಷ್ಮೀ, ಸಂಘದ ಚೆನ್ನವೀರಪ್ಪ, ಶೋಭಾ ಬಸವರಾಜು, ಶಿಕ್ಷಕರಾದ ಜೆ. ಜಗದೀಶ್, ಪುಟ್ಟರಾಜು, ರೀಟಾ, ಶ್ರೀನಿವಾಸ, ಮಂಜುನಾಥ್, ಶ್ರೀರಾಮ, ಗಿರಿಜಾಂಬಿಕಾ, ಪವಿತ್ರಾ, ಸಣ್ಣಸ್ವಾಮಿ, ಧೃವಣ್ಣ, ಸ್ವಾಮಿ, ಕಮಲಾಕ್ಷ್ಮೀ, ಹರೀಶ್, ದೇವರಾಜು, ದೇವಪ್ಪ, ಸುಜಾತಾ, ಶ್ವೇತಾ, ಚಂದ್ರಕಲಾ, ಆಶಾ, ಸಹನಾ, ಶಾಲಾ ಮಕ್ಕಳು ಪಾಲಕರು, ಉಪಸ್ಥಿತರಿದ್ದರು.