ನೈಪುಣ್ಯ ಪಿಯು ಡೆ ಮತ್ತು ರೆಸಿಡೆನ್ಷಿಯಲ್ ಕಾಲೇಜು ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಗುರುರಾಜ್ ಶ್ರೀಧರ್, ಪ್ರಶಾಂತ್ ಕುಮಾರ್ ನಾಯಕ್, ಕೌಟಿಲ್ಯ ಇದ್ದರು.
ಕೃತಕ ಬುದ್ಧಿಮತ್ತೆ (ಎಐ) ಎಂಬುದು ಈ ಕಾಲದ ಕ್ರಾಂತಿಕಾರಕ ಬದಲಾವಣೆಯಾಗಿದ್ದು ಕೆಲವೊಂದು ಕೆಲಸಗಳು ಸುಲಲಿತವಾಗಿ ನಡೆಯಲಿವೆ. ಆದರೆ, ನಂತರದ ದಿನಗಳಲ್ಲಿ ಇದರಿಂದ ಅಪಾಯಗಳು ತಪ್ಪಿದ್ದಲ್ಲ ಎಂದು ಶಿಕ್ಷಣ ತಜ್ಞ ಪ್ರೊ.ಗುರುರಾಜ್ ಶ್ರೀಧರ್ ತಿಳಿಸಿದರು.
ನೈಪುಣ್ಯ ಪಿಯು ಡೆ ಮತ್ತು ರೆಸಿಡೆನ್ಷಿಯಲ್ ಕಾಲೇಜು ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಕೆರಿಯರ್ ಕೌನ್ಸೆಲಿಂಗ್ ತಜ್ಞರೊಂದಿಗೆ ಮುಕ್ತ ಸಂವಾದ-ಸೂಕ್ತ ಪರಿಹಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಡೇಟಾ ಸೆಂಟರ್ ಆರಂಭಿಸಿದರೆ ಅದಕ್ಕೆ ನಮ್ಮ ಮೈಸೂರು ನಗರಕ್ಕೆ ಒಂದು ವರ್ಷಕ್ಕೆ ಬೇಕಾಗುವ ವಿದ್ಯುತ್ ಒಂದೇ ದಿನಕ್ಕೆ ಬೇಕಾಗುತ್ತದೆ. ಮಾತ್ರವಲ್ಲದೆ ಕೂಲಿಂಗ್ ವ್ಯವಸ್ಥೆಗೆ ಹೆಚ್ಚು ಶುದ್ಧ ನೀರು ಬೇಕಾಗುತ್ತದೆ. ಹಾಗಾಗಿ ಈ ಬೆಳವಣಿಗೆಯಿಂದ ಭವಿಷ್ಯದಲ್ಲಿ ದೊಡ್ಡ ಅಪಾಯ ಕಾದಿದೆ ಎಂದು ಎಚ್ಚರಿಸಿದರು.
ವೃತ್ತಿ ಮಾರ್ಗದರ್ಶಕ ಪ್ರಶಾಂತ್ ಕುಮಾರ್ ನಾಯಕ್ ಮಾತನಾಡಿ, ಇತ್ತೀಚಿನ ಪರಿಸ್ಥಿತಿ ಗಮನಿಸಿದರೆ ಕೇವಲ ಪದವಿ ಅಧ್ಯಯನದಿಂದ, ಅಂಕಗಳಿಂದ ವೃತ್ತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪದವಿಯೊಂದಿಗೆ ಕೌಶಲ ತರಬೇತಿ ಪಡೆದವರು ಉದ್ಯೋಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಾಗಾಗಿ ಪಾಲಕರು ಶಿಕ್ಷಣ ಕೊಡಿಸುವುದರ ಜತೆಗೆ ಕೌಶಲ ತರಬೇತಿ ಕೊಡಿಸಬೇಕೆಂದು ಸಲಹೆ ನೀಡಿದರು.
ಕೌಶಲ ತರಬೇತಿ ನೀಡುವಾಗ ಸಂವಹನ ಕೌಶಲ, ಆತ್ಮವಿಶ್ವಾಸ, ನಾಯಕತ್ವ, ಟೀಮ್ ವರ್ಕ್, ಡಿಜಿಟಲ್ ಸ್ಕಿಲ್, ಆರ್ಥಿಕ ಜಾಗೃತಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬಗ್ಗೆ ತಿಳಿಸಿಕೊಡುತ್ತಾರೆ. ಮಾತ್ರವಲ್ಲದೆ ಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿಗೆ ಅನುಗುಣವಾಗಿ ಕೌಶಲ ತರಬೇತಿ ಕೊಡಿಸುವುದು ಮುಖ್ಯವಾಗಿದೆ. ಮಕ್ಕಳು ಯಶಸ್ವಿಯಾಗಬೇಕಾದರೆ 52 ಬಗೆಯ ಸ್ಕಿಲ್‌ಗಳನ್ನು ಕಲಿಯಬೇಕು ಎಂದು ಹೇಳಿದರು.
ನೈಪುಣ್ಯ ಸ್ಕೂಲ್ ಆ್ ಎಕ್ಸಲೆನ್ಸ್‌ನ ಕಾರ್ಯದರ್ಶಿ ಕೌಟಿಲ್ಯ ಇದ್ದರು.