ನಗರದ ಗಾನಭಾರತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ನಾಗೇಶ ವಿ.ಬೆಟ್ಟಕೋಟೆ ಉದ್ಘಾಟಿಸಿದರು. ಎಚ್.ಆರ್.ಭಾಗವನ್, ಮಹತಿ ವಿಜಯಪ್ರಕಾಶ್, ಬಾಲರಾಜು, ಡಾ.ಕೃಪಾ ಫಡ್ಕೆ ಇದ್ದರು. 
ಮೈಸೂರು

ದೇಶದ ಸಂಸ್ಕೃತಿಗಿದೆ ಯುವಜನಾಂಗ ರಕ್ಷಿಸುವ ಶಕ್ತಿ

ಮೈಸೂರು: ಇಂದಿನ ತಾಂತ್ರಿಕ ಜಗತ್ತಿನಲ್ಲಿ ಯುವ ಜನಾಂಗ ದಿಕ್ಕು ತಪ್ಪದಂತೆ ಕಾಪಾಡುವ ಶಕ್ತಿ ನಮ್ಮ ದೇಶದ ಸಂಸ್ಕೃತಿಗಿದೆ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ ವಿ.ಬೆಟ್ಟಕೋಟೆ ಅಭಿಪ್ರಾಯಪಟ್ಟರು.
ಶ್ರೀ ನಟರಾಜ ರ್ಪಾರ್ಮಿಂಗ್ ಆರ್ಟ್ಸ್ ಸೆಂಟರ್ ವತಿಯಿಂದ ನಗರದ ಗಾನಭಾರತಿ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಭಾರತೀಯ ಶಾಸ್ತ್ರೀಯ ಕಲೆಗಳ ಸಂಭ್ರಮದ ‘ಮಂಜೀರ ಮಹೋತ್ಸವ’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಅದರಲ್ಲಿಯೂ ಪ್ರದರ್ಶಕ ಕಲೆಗಳಾದ ನೃತ್ಯ, ನಾಟಕಗಳನ್ನು ರೂಢಿಸಿಕೊಂಡು ಅಭ್ಯಾಸ ಮಾಡಿದರೆ ಏಕಾಗ್ರತೆ, ವಿಶಾಲವಾದ ಮನಸ್ಥಿತಿ ಬೆಳೆಸಲಿದೆ. ಇದರಿಂದ ವ್ಯಕ್ತಿ ವಿಕಸನಗೊಂಡು ಜನರನ್ನು ಗೌರವಿಸುವ ಶಿಸ್ತುಬದ್ಧ ಜೀವನವನ್ನು ಕಲ್ಪಿಸಿಕೊಡಲಿದೆ. ಹೀಗಾಗಿ ಭಾರತೀಯ ಕಲೆಗಳು ದೇಶದ ಸಂಸ್ಕೃತಿ, ಪರಂಪರೆಯನ್ನು ಬೆಳೆಸುವ ಸಾಧನವಾಗಿದೆ ಎಂದರು.
ಕಲೆಗಳನ್ನು ಕೇವಲ ನೋಡುವುದಕ್ಕಿಂತ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಕಲೆಗಳಲ್ಲಿ ಎಲ್ಲ ವರ್ಗದ, ಧರ್ಮ ಜನರನ್ನು ಭಾಗಿಯಾಗಿಸಲಿದೆ. ಇದು ಸಂಸ್ಕೃತಿಯ ಬೆಳವಣಿಗೆ ಕಾರಣವಾಗಲಿದೆ. ಸಂಗೀತ ವಿವಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಭರತನಾಟ್ಯ, ಕಥಕ್, ಕೂಚುಪುಡಿ, ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ, ಕರ್ನಾಟಿಕ್ ಶಾಸ್ತ್ರೀಂು ಸಂಗೀತ, ಭರತನಾಟ್ಯ ನೃತ್ಯ ಪರೀಕ್ಷೆಗಳಿಗೆ 20 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಗುರುಗಳ ನೋಂದಣಿ ಸಂಖ್ಯೆ ಮೂರು ಸಾವಿರ ದಾಟಿದೆ. ಇದನ್ನು ಗಮನಸಿದಾಗ ನಮ್ಮ ಸಂಸ್ಕ ೃತಿ ಗಟ್ಟಿಯಾಗಿ ನೆಲೆಯೂರುತ್ತಿದೆ ಎನಿಸಲಿದೆ ಎಂದರು.
ಹರಿ ವಿದ್ಯಾಲಂುದ ಕಾರ್ಯದರ್ಶಿ ಎಚ್.ಆರ್.ಭಾಗವನ್, ವಿಪಿ ಕಲ್ಚರಲ್ ಕ್ಲಬ್ ನಿರ್ದೇಶಕಿ ಮಹತಿ ವಿಜಯಪ್ರಕಾಶ್, ಶ್ರೀ ನಟರಾಜ ರ್ಪಾರ್ಮಿಂಗ್ ಆರ್ಟ್ಸ್ ಸೆಂಟರ್ (ಎಸ್‌ಎನ್‌ಪಿಎಸಿ)ನ ಅಧ್ಯಕ್ಷ ಬಾಲರಾಜು, ಡಾ.ಕೃಪಾ ಫಡ್ಕೆ ಇದ್ದರು.