ಸರಗೂರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಮಲ್ಲೇಶ್ ನಾಯಕ, ಮಹದೇವ ನಾಯಕ, ರಾಜನಾಯಕ ಇತರರು ಇದ್ದರು.  
ಮೈಸೂರು

ಸಮಾಜಕ್ಕೆ ಸಂತ ಸೇವಾಲಾರರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • saints
ಸರಗೂರು: ಸಂತ ಸೇವಾಲಾಲ್ ಅವರ ತ್ಯಾಗದ ಫಲದಿಂದಾಗಿಯೇ ಬಂಜಾರ ಸಮಾಜ ಮುಂದುವರಿಯಲು ಸಾಧ್ಯವಾಯಿತು ಎಂದು ಸರಗೂರು ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಭೇನಿತೋ ಚಾಬೇನ್ ಮಳೇನಿ ಅಂದರೆ ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ ಎಂಬುದು ಸೇವಾಲಾಲರ ಪ್ರಸಿದ್ಧ ನಾಣ್ನುಡಿ. ಅದರಂತೆ, ಶ್ರಮ ಜೀವಿಗಳು, ಅಲೆಮಾರಿ ಬುಡಕಟ್ಟು ಸಮುದಾಯದ ಬಡ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್ ಅವರ ಕೊಡುಗೆ ಸಮಾಜಕ್ಕೆ ಅಪಾರ ಎಂದರು.
ಸಂತ ಸೇವಾಲಾಲ್ ಸಂಘದ ಅಧ್ಯಕ್ಷ ಮಲ್ಲೇಶ್ ನಾಯಕ ಮಾತನಾಡಿ, ಸಂತ ಸೇವಾಲಾಲ್‌ರು ಬಂಜಾರ ಸಮಾಜದ ಪವಾಡ ಪುರುಷ. ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತರು ಎಂದರು.
ಮುಖ್ಯ ಭಾಷಣಕಾರ ಸಚಿನ್ ಮಾತನಾಡಿ, ಸೇವಾಲಾಲರು ಮನುಷ್ಯನಿಗೆ ಮಾತ್ರವಲ್ಲ, ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂಬ ಸಂದೇಶ ಸಾರಿದ್ದರು ಎಂದರು.
ಭೋಜರಾಜ ನಾಯಕ, ಸಂಘದ ಉಪಾಧ್ಯಕ್ಷ ಮಹದೇವ ನಾಯಕ, ಗ್ರಾಪಂ ಮಾಜಿ ಸದಸ್ಯ ರಾಜನಾಯಕ, ಮುಖಂಡರಾದ ಸಂಜನಾಯಕ, ಪಾಪನಾಯಕ, ಮದನ್, ಎ.ಎಸ್.ಐ ಕೃಷ್ಣಕುಮಾರ್, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ದಸಂಸ ಮುಖಂಡರಾದ ಶಿವನಂಜು, ಅಣ್ಣಯ್ಯ ಸ್ವಾಮಿ, ದೇವರಾಜು, ರಾಜಸ್ವ ನಿರೀಕ್ಷಕರಾದ ರವಿಚಂದ್ರನ್, ಮುಜೀಬ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ಜಿ.ವಿ. ಪಾಟೀಲ್, ಸಿಬ್ಬಂದಿ ನೇಮನ್ ಷರಿಫ್ ಇತರರು ಇದ್ದರು.