ನಂಜನಗೂಡು ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಶ್ರೀ ಬಿಳಿಗಿರಿ ರಂಗನಾಥಸ್ವಾಮಿಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಜನಪದ ಕಲಾ ಉತ್ಸವವನ್ನು ಹಾಡ್ಯ ರಂಗಸ್ವಾಮಿ ಉದ್ಘಾಟಿಸಿದರು. ಆನಂದಕುಮಾರ್, ಶಿವಮಲ್ಲಯ್ಯ, ಕೆ.ಆರ್ ವೆಂಕಟೇಶ್, ಶಿವನಾಗ, ನಾಗರಾಜು, ರಂಗಸ್ವಾಮಿ ಇತರರಿದ್ದರು. 
ಮೈಸೂರು

ಜನಪದ ಕಲೆ ಉಳಿವಿಗೆ ಸಂಘ, ಸಂಸ್ಥೆಗಳ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ ಅಭಿಪ್ರಾಯ
  • ಜಾನಪದ ಕಥೆ, ಗಾಯನ, ಸುಗಮ ಸಂಗೀತ ಕಾರ್ಯಕ್ರಮ
ನಂಜನಗೂಡು: ಸಂಘ-ಸಂಸ್ಥೆಗಳ ಶ್ರಮದಿಂದ ಜನಪದ ಕಲೆಗಳು ಉಳಿದಿದ್ದು, ಕಲಾವಿದರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಗಮನಕ್ಕೆ ತರಲಾಗುವುದು ಎಂದು ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ತಿಳಿಸಿದರು.
ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಶ್ರೀ ಬಿಳಿಗಿರಿ ರಂಗನಾಥಸ್ವಾಮಿಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಶುಕ್ರವಾರ ಆಯೋಜಿಸಿದ್ದ್ದ ಬಿಳಿಗಿರಿರಂಗಯ್ಯನ ನೋಡೋಣ ಬನ್ನಿ ಜನಪದ ಕಲಾ ಪ್ರದರ್ಶನ, ಜಾನಪದ ಕಥೆ, ಗಾಯನ, ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಸಂಘ-ಸಂಸ್ಥೆಗಳು ನಾಡಿನ ಮೂಲ ಕಲೆಗಳಾದ ತಮಟೆ, ಸೋಬಾನೆ, ಕೋಲಾಟ ದೊಣ್ಣೆವರಸೆ, ಪೂಜಾ ಕುಣಿತ, ವೀರಗಾಸೆ, ಜನಪದ ಕಥೆ ಸೇರಿದಂತೆ ಅನೇಕ ಕಲೆಗಳ ಉಳಿವಿಗೆ ಸಂಘ-ಸಂಸ್ಥೆಗಳು ಶ್ರಮಿಸುತ್ತಿವೆ. ಕಲಾವಿದರ ಕಲೆಯನ್ನು ಪ್ರೋತ್ಸಾಹಿಸಲು ಅನುದಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ನಿವೃತ್ತ ಆರ್‌ಟಿಒ ನಿರೀಕ್ಷಕ ಕೆ.ಸಿ ಮುನಿಸ್ವಾಮಿ ಮಾತನಾಡಿ, ಬಿಳಿಗಿರಿರಂಗಸ್ವಾಮಿ ಸಾಂಸ್ಕೃತಿಕ ದಾಸ ಪರಂಪರೆ ಭಾಗವಾಗಿದ್ದು, ಈ ಪರಂಪರೆಯು ಗ್ರಾಮೀಣ ಭಾಗದಲ್ಲಿ ಕೆಲವು ಜನರಲ್ಲಿ ಮಾತ್ರ ಇದೆ. ಈ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಬೇಕು ಎಂದರು.
ಇದಕ್ಕೂ ಮೊದಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೋಮಲಾ ಸಿದ್ದರಾಜು ಜನಪದ ಕಲಾತಂಡ ಪ್ರದರ್ಶನಕ್ಕೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.
ಗ್ರಾಮ ಪಂಚಾಯಿತಿ ಸದಸ್ಯ ಆನಂದ ಕುಮಾರ್, ಯಜಮಾನರಾದ ಶಿವಮಲ್ಲಯ್ಯ, ಕೆ.ಆರ್ ವೆಂಕಟೇಶ್, ಶಿವನಾಗ, ನಾಗರಾಜು, ರಂಗಸ್ವಾಮಿ ಟ್ರಸ್ಟ್ ಸದಸ್ಯ ಗಟ್ಟವಾಡಿ ಶಿವಯ್ಯ, ವಿದ್ವಾನ್ ಕೆ.ನಂಜುಂಡಯ್ಯ, ಕೂಗಲೂರು ಶಿವರಾಜು, ಪದ್ಮ, ಶ್ರೀನಿವಾಸ ಮೂರ್ತಿ, ಮಂಜು, ರಾಘವೇಂದ್ರ, ಮಾದೇಶ, ನಾಗೇಶ ಮೂರ್ತಿ, ಪುರುಷೋತ್ತಮ ಇತರರು ಇದ್ದರು.