ಕೆ.ಆರ್.ನಗರದ ಶ್ರೀ ಯಡತೊರೆ ಬಿಎಡ್ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉಪನ್ಯಾಸಕ ಡಿ.ಶ್ರೀನಿವಾಸ್ ಉದ್ಘಾಟಿಸಿದರು. ಸಿ.ಆರ್.ಲೋಕೇಶ್ ಭರಣಿ, ಎನ್.ಎಸ್.ದೀಪಾ, ಕೆ.ಮಹದೇವ್, ಮಹೇಶ್ವರಿಸ್ವಾಮಿ, ಕೆ.ಬಿ.ಭೀನಾ, ಮೋಹನಕುಮಾರಿ, ರೇಖಾ ಶ್ರೀನಿವಾಸ್, ಸ್ವಾಮಿನಾಯಕ, ರಕ್ಷಿತ್ ಇತರರು ಇದ್ದರು.
ಕೆ.ಆರ್.ನಗರ: ಡಾ.ಬಿ.ಆರ್.ಅಂಬೇಡ್ಕರ್ ಸರ್ವರಿಗೂ ಸರ್ವ ಕಾಲಕ್ಕೂ ಸಲ್ಲುವಂತಹ ಸಂವಿಧಾನ ರಚಿಸಿದ ಮಹಾತ್ಮರಾಗಿದ್ದು, ಅವರನ್ನು ನಾವೆಲ್ಲ ಪ್ರತಿನಿತ್ಯ ಸ್ಮರಿಸಬೇಕು ಎಂದು ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕ ಡಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀ ಯಡತೊರೆ ಬಿಎಡ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮ ಸಮಾಜಗಳ ನಿರ್ಮಾಣಕ್ಕೆ ಶ್ರಮಿಸಿ ಅನುಭವ ಮಂಟಪ ಎಂಬ ಸಂಸತ್ತನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಬಾಬಾ ಸಾಹೇಬರು ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದವರು. ಅವರು ಬಾಲ್ಯದಿಂದಲೇ ಕಷ್ಟಪಟ್ಟು ಶಿಕ್ಷಣ ಕಲಿಯುವಂತಹ ಸನ್ನಿವೇಶಗಳು ನಿರ್ಮಾಣವಾಗಿತ್ತು. ಅಂತಹ ಅಡತಡೆ ಮೀರಿ ದೇಶ ವಿದೇಶಗಳಲ್ಲಿ ಕಲಿತು ಹಲವು ಪದವಿಗಳನ್ನು ಗಳಿಸಿ ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞರಾಗಿ, ರಾಜಕೀಯ ಚಿಂತಕರಾಗಿ, ಶಿಕ್ಷಣ ತಜ್ಞರಾಗಿ ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲರಾದ ಎನ್.ಎಸ್.ದೀಪಾ, ಉಪನ್ಯಾಸಕ ಕೆ.ಮಹದೇವ್, ಮಹೇಶ್ವರಿಸ್ವಾಮಿ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ಸಿ.ಆರ್.ಲೋಕೇಶ್ ಭರಣಿ, ಉಪನ್ಯಾಸಕರಾದ ಕೆ.ಬಿ.ಭೀನಾ, ಮೋಹನಕುಮಾರಿ, ಸಮಾಜ ಸೇವಕಿ ರೇಖಾ ಶ್ರೀನಿವಾಸ್, ವಿದ್ಯಾರ್ಥಿಗಳಾದ ಸ್ವಾಮಿನಾಯಕ, ರಕ್ಷಿತ್ ಇದ್ದರು.