ಅರಸು ಯುವಜನ ವೇದಿಕೆ ಆಯೋಜಿಸಿರುವ ಮೂರು ದಿನಗಳ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಗಾಲ್ಫರ್ ಪ್ರಣವಿ ಅರಸ್, ಫಾಲ್ಗುಣ ವಿ.ಅರಸ್ ಚಾಲನೆ ನೀಡಿದರು. ಅನಿಲ್ ಅರಸ್, ಕೆ.ಎಸ್. ಮಲ್ಲರಾಜೆ ಅರಸ್, ಶ್ರೀಕಾಂತ್‌ರಾಜೇ ಅರಸ್, ಪುನೀತ್ ಅರಸ್, ಲಾವಣ್ಯ ಅರಸ್ ಇತರರು ಇದ್ದರು. 
ಮೈಸೂರು

ಅರಸು ಯುವ ವೇದಿಕೆಯಿಂದಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಪ್ರಮುಖ ಮುಖ್ಯಾಂಶಗಳು

  • ಟೂರ್ನಮೆಂಟ್‌ನ ಎಂಟನೇ ಆವೃತ್ತಿ
  • 14 ತಂಡಗಳು, ನಾಲ್ಕು ಗುಂಪುಗಳಲ್ಲಿ ಸೆಣಸಾಟ
ಮೈಸೂರು: ಅರಸು ಯುವಜನ ವೇದಿಕೆ ಆಯೋಜಿಸಿರುವ ಮೂರು ದಿನಗಳ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಅಂತಾರಾಷ್ಟ್ರೀಯ ಗಾಲ್ಫರ್ ಪ್ರಣವಿ ಅರಸ್, ಮೋಟಾರ್‌ಸ್ಪೋರ್ಟ್ಸ್ ರೇಸರ್ ಫಾಲ್ಗುಣ ವಿ.ಅರಸ್ ಚಾಲನೆ ನೀಡಿ, ಕ್ರೀಡೆಯಲ್ಲಿ ಗೆಲುವು-ಸೋಲು ಸಹಜವಾದರೂ, ನೈತಿಕತೆ, ಶಿಸ್ತು ಮತ್ತು ಸತ್ಯಸಂಧತೆ ಮುಖ್ಯ ಎಂದು ಹೇಳಿದರು. ಉದ್ಘಾಟನಾ ವೇಳೆ ಪ್ರಣವಿ ಮತ್ತು ಫಾಲ್ಗುಣ ಅರಸ್, ಅನಿಲ್ಅರಸ್, ಕೆ.ಎಸ್.ಮಲ್ಲರಾಜೆ ಅರಸ್ ಅವರನ್ನು ಸನ್ಮಾನಿಸಲಾಯಿತು.
ಟೂರ್ನಮೆಂಟ್‌ನ ಎಂಟನೇ ಆವೃತ್ತಿಯ ಕುರಿತು ಮಾಹಿತಿ ನೀಡಿದ ವೇದಿಕೆಯ ಗೌರವಾಧ್ಯಕ್ಷ ಶ್ರೀಕಾಂತ್‌ರಾಜೇ ಅರಸ್, 14 ತಂಡಗಳನ್ನು ನಾಲ್ಕು ಗುಂಪುಗಳಿಗೆ ವಿಭಜಿಸಲಾಗಿದ್ದು, ಪ್ರತಿ ಗುಂಪಿನಿಂದ ಎರಡು ತಂಡಗಳು ಕ್ವಾರ್ಟರ್‌ಫೈನಲ್‌ಗೆ ಅರ್ಹವಾಗಲಿವೆ ಎಂದು ತಿಳಿಸಿದರು. 
ನಾಕೌಟ್ ಮಾದರಿಯಲ್ಲಿ ನಡೆಯುವ ಫೈನಲ್ ಪಂದ್ಯ ಡಿ. 7ರಂದು ನಡೆಯಲಿದೆ. ವಿಜೇತರಿಗೆ 1 ಲಕ್ಷ ರೂ., ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಉತ್ತಮ ಆಟಗಾರರಿಗೆ ವಿವಿಧ ವೈಯಕ್ತಿಕ ಪ್ರಶಸ್ತಿಗಳೂ ಘೋಷಿಸಲಾಗಿದೆ ಎಂದು ತಿಳಿಸಿದರು. 
ವೇದಿಕೆ ಅಧ್ಯಕ್ಷ ಪುನೀತ್ ಅರಸ್, ಲಾವಣ್ಯ ಅರಸ್ ಇತರರು ಇದ್ದರು.