- ಸೆಪ್ಟೆಂಬರ್ 30ರವರೆಗೆ ಅವಧಿ ವಿಸ್ತರಿಸಿರುವ ರೈಲ್ವೆ ಇಲಾಖೆ
ಮೈಸೂರು: ಕೆಲವು ನಿಲ್ದಾಣಗಳಲ್ಲಿನ ಈ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಾಗಿದ್ದು, ಅದರಂತೆ, ಈ ಮೊದಲು ಜೂನ್ 30ರವರೆಗೆ ನಿಗದಿಪಡಿಸಿದ್ದ ತಾತ್ಕಾಲಿಕ ನಿಲುಗಡೆಗಳನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು-ಹೊಸಪೇಟೆ-ಬೆಂಗಳೂರು ಪ್ಯಾಸೆಂಜರ್ ರೈಲಿನ (ರೈಲು ಸಂಖ್ಯೆ 56519/56520 )ದೇವನೂರು, ಹೊಳಲ್ಕೆರೆ , ಅಮೃತಾಪುರ ನಿಲ್ದಾಣಗಳ ತಾತ್ಕಾಲಿಕ ನಿಲುಗಡೆಯು ಸೆ.30ರವರೆಗೆ ಮುಂದುವರಿಯುತ್ತದೆ.
ಅದೇ ರೀತಿ, ಬೆಳಗಾವಿ-ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್(20675/20676 ) ಮತ್ತು ಬೆಂಗಳೂರು-ಸಿಂಧನೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ(17391/17392) ರಾಮಗಿರಿ ನಿಲ್ದಾಣದ ತಾತ್ಕಾಲಿಕ ನಿಲುಗಡೆಯನ್ನೂ ವಿಸ್ತರಿಸಲಾಗಿದೆ.
ಯಶವಂತಪುರ-ಬಿಕಾನೇರ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ (16587/16588 )ಬೀರೂರು ನಿಲ್ದಾಣದ ತಾತ್ಕಾಲಿಕ ನಿಲುಗಡೆ ಮತ್ತು ಬೆಂಗಳೂರು-ಸಿಂಧನೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ (ರೈಲು ಸಂಖ್ಯೆ 17391/17392)ಚಳಗೇರಿ ನಿಲ್ದಾಣದ ತಾತ್ಕಾಲಿಕ ನಿಲುಗಡೆಯೂ ಮುಂದುವರಿಯುತ್ತದೆ.
ಬೆಂಗಳೂರು-ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ(20651/20652 )ಅರಸಾಳು , ಕುಂಸಿ ನಿಲ್ದಾಣಗಳ ತಾತ್ಕಾಲಿಕ ನಿಲುಗಡೆಯನ್ನೂ ವಿಸ್ತರಿಸಲಾಗಿದೆ. ಅದೇ ರೀತಿ, ಯಶವಂತಪುರ- ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (16579/16580 )ಚಿಕ್ಕಬಾಣಾವರ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಮುಂದುವರಿಯಲಿದೆ.
ಹಾಗೆಯೇ, ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು(ರೈಲು ಸಂಖ್ಯೆ 16239/16240 ) ಸಂಪಿಗೆ ರೋಡ್ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಮುಂದುವರಿಸಲಿದೆ.
ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನ (16228)ಮಲ್ಲೇಶ್ವರಂ ನಿಲ್ದಾಣದ ತಾತ್ಕಾಲಿಕ ನಿಲುಗಡೆ ಮತ್ತು ಮೈಸೂರು-ತಿರುವನಂತಪುರಂ ನಾರ್ತ್ ಮೈಸೂರು ಎಕ್ಸ್‌ಪ್ರೆಸ್ ರೈಲಿನ (16315/16316 )ಮದ್ದೂರು ನಿಲ್ದಾಣ, ಬೆಂಗಳೂರು-ಅಶೋಕಪುರಂ ಮೆಮು ರೈಲು(66553) ಕೃಷ್ಣದೇವರಾಯ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.