ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ಶ್ರೀ ಮಾಸ್ತಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ, ಕಾರ್ಯಕ್ರಮದಲ್ಲಿ ಎಚ್.ಪಿ.ಮಂಜುನಾಥ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಕುಮಾರ್, ಬಸವರಾಜ್, ಛಾಯಾ ಸೇರಿದಂತೆ ಇತರರು ಇದ್ದರು. 
ಮೈಸೂರು

ದೇವಸ್ಥಾನಗಳು ಶಾಂತಿ, ಸಂಸ್ಕಾರ ನೀಡುವ ಕೇಂದ್ರಗಳು

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅಭಿಮತ
ಹನಗೋಡು: ಇಂದಿನ ಒತ್ತಡದ ಬದುಕಿನ ಜಂಜಾಟದಲ್ಲಿ ಸಿಲುಕಿರುವ ಜನರಿಗೆ ದೇವಾಲಯಗಳು ಮಾನಸಿಕ ಶಾಂತಿ ಹಾಗೂ ನೆಮ್ಮದಿ ನೀಡುವ ಪ್ರಮುಖ ತಾಣಗಳಾಗಿವೆ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾಸ್ತಮ್ಮ ದೇವಿಯ ದೇವಾಲಯದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ವಿಶಿಷ್ಟ ಸ್ಥಾನಮಾನವಿದ್ದು, ಅವುಗಳು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲದೆ ಸಮಾಜಕ್ಕೆ ಶಾಂತಿ, ಸೌಹಾರ್ದ ಹಾಗೂ ಸಂಸ್ಕಾರವನ್ನು ನೀಡುವ ಕೇಂದ್ರಗಳಾಗಿವೆ. ಧರ್ಮಾಚರಣೆಯಿಂದ ಮನುಷ್ಯನು ಸಂಸ್ಕಾರವಂತನಾಗುತ್ತಾನೆ. ಜನ್ಮ ನೀಡಿದ ತಂದೆ-ತಾಯಿಯನ್ನು ದೇವರ ಸ್ಥಾನದಲ್ಲಿ ಕಾಣುವ ಮನೋಭಾವ ಬೆಳೆಸಬೇಕು. ನಮ್ಮ ಕಷ್ಟಕಾಲದಲ್ಲಿ ನೆರವಾದವರನ್ನು ಸ್ಮರಿಸುವ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮದಲ್ಲಿ ದೇವಾಲಯವನ್ನು ನಿರ್ಮಿಸಿ ಪೂಜೆ ಸಲ್ಲಿಸುವುದರಲ್ಲೇ ಕರ್ತವ್ಯ ಮುಗಿಯುವುದಿಲ್ಲ. ದೇವಾಲಯಗಳ ಪಾವಿತ್ರೃತೆಯನ್ನು ಕಾಪಾಡುವುದರೊಂದಿಗೆ ನಿತ್ಯ ಪೂಜೆ-ನೈವೇದ್ಯ, ಸೇವಾಕೈಂಕರ್ಯಗಳನ್ನು ನಿರಂತರವಾಗಿ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಗೀತಾ ಸುರೇಶ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಸುಚಿದರ್ ಹಾಗೂ ಪ್ರೆಮ್ ಕುಮಾರ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕಲ್ಕುಣಿಕೆ ರಾಘು, ಉದ್ಯಮಿಗಳಾದ ರಾಜು ಶಿವರಾಜೇಗೌಡ, ಟಿ.ಕೃಷ್ಣ, ಡಾ.ಎಚ್.ವಿ.ಕಾರ್ತಿಕ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಎಚ್.ಎಸ್.ಕುಮಾರ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಹೆಮ್ಮಿಗೆ ರಾಮೇಗೌಡ, ಹನಗೋಡು ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಕಚ್ಚುವಿನಹಳ್ಳಿ ಲೋಕೇಶ್, ದೇವಾಲಯ ಸೇವಾ ಸಮಿತಿ ಸದಸ್ಯರಾದ ಕುಮಾರ್, ಬಸವರಾಜ್, ಯಜಮಾನರಾದ ರಾಜೇಗೌಡ, ಮುದ್ದೇಗೌಡ, ನಾಗೇಗೌಡ, ನಾಗರಾಜಶೆಟ್ಟಿ, ಮಾದನಾಯಕ, ಶಿವಣ್ಣನಾಯಕ, ವೀರಭದ್ರಶೆಟ್ಟಿ, ನಟೇಶ್, ಮಹದೇವಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.