ಬೆಟ್ಟದಪುರದ ಕಾಳಿಕಾಂಬಾ ದೇವಾಲಯದ ಖಾಲಿ ನಿವೇಶನದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಂಟಿ ಪರಿಶೀಲನಾ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಿತು. ಪಿಡಿಒ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ನಿರಂಜನ್, ಮುಖಂಡರಾದ ಸೋಮಾಚಾರಿ, ವರದರಾಜು ಇದ್ದರ 
ಮೈಸೂರು

ದೇಗುಲದ ಖಾಲಿ ನಿವೇಶನ ಪರಿಶೀಲನೆ

ಎ. ಆರ್. ರಘುರಾಮ
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀ ಕಾಳಿಕಾಂಬಾ ದೇವಾಲಯದ ಖಾಲಿ ನಿವೇಶನದ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಜಂಟಿ ಪರಿಶೀಲನಾ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ತಂಡದ ಪ್ರಮುಖರು ಸ್ಥಳ ಪರಿಶೀಲನೆ ಸಂದರ್ಭ ವಾದಿ ಮತ್ತು ಪ್ರತಿವಾದಿಗಳ ಸಮ್ಮುಖದಲ್ಲಿ ಮಾಹಿತಿ ಪಡೆದು, ವರದಿ ಮಾಡಿಕೊಂಡಿದ್ದು ಗಮನ ಸೆಳೆಯಿತು. ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ತಾ.ಪಂ. ಇಒ ನ್ಯಾಯಲಯಕ್ಕೆ ಡಿ.18ರೊಳಗೆ ವರದಿಯನ್ನು ಸಲ್ಲಿಸಬೇಕಾಗಿದೆ ಎಂದು ಜಂಟಿ ಪರಿಶೀಲನಾ ತಂಡದಲ್ಲಿದ್ದ ಪಿಡಿಒ ನಾಗೇಂದ್ರ ಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ಪಿಡಿಒ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ನಿರಂಜನ್, ಮುಖಂಡರಾದ ಸೋಮಾಚಾರಿ, ವರದರಾಜು, ಚಂದ್ರಶೇಖರ್, ರವಿಕುಮಾರ್, ಸತೀಶ್, ಅರುಣ, ಶಶಿ, ಅಶೋಕ್, ನಾಗರಾಜು, ಮಹದೇವಚಾರಿ, ನಂಜುಂಡ, ಹಿರಣ್ಣಯ್ಯ, ಕುಮಾರಸ್ವಾಮಿ, ಜೋಗನಹಳ್ಳಿ ಲೋಕೇಶ್ ಇದ್ದರು.