ಮಡಿಲು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ ವಿತರಿಸಲಾಯಿತು. ಡಿ.ಎಂ. ತ್ರಿವೇಣಿ, ಪ್ರಸನ್ನ ಕುಮಾರ್, ಚೆಲುವರಾಜು ಇತರರು ಇದ್ದರು.
ಶಿಕ್ಷಕರು ಹಾಗೂ ಪಾಲಕರು ಸಮನ್ವಯದಿಂದ ಕೆಲಸ ಮಾಡಿದರೆ ಸರ್ಕಾರಿ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು. ಭವಿಷ್ಯದ ಸಮಾಜವನ್ನು ಉತ್ತಮವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಮಡಿಲು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ತ್ರಿವೇಣಿ ತಿಳಿಸಿದರು.
ಹುಣಸೂರು ತಾಲೂಕು ಕಸಬಾ ಹೋಬಳಿ ಬನ್ನಿಕುಪ್ಪೆ ಸಮೀಪ ಉದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಡಿಲು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ 160 ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ಸಮವಸ ವಿತರಿಸಿ ಅವರು ಮಾತನಾಡಿದರು.
ಮಡಿಲು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು 2017ರಲ್ಲಿ ಪ್ರಾರಂಭವಾಗಿ ಇಲ್ಲಿವರೆಗೂ ತಾಲೂಕಿನಾದ್ಯಂತ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಬೀರೇಗೌಡ, ತಾಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷ ಲಕ್ಷ್ಮೇಗೌಡ. ಸದಸ್ಯರಾದ ಮಂಜುನಾಥ್, ಮಹದೇವು, ಜಲೇನ್ರಿ ಗುರುಮಲ್ಲಪ್ಪ, ಚಿಕ್ಕಮಂಚನಾಯಕ, ರವಿನಾಯಕ, ಪ್ರಸನ್ನ, ಶಿಲ್ಪಾ, ಮಂಜುನಾಥ, ಸೋಮಣ್ಣ, ಶೇಖರ್, ರವಿಕುಮಾರ್, ಮುಖ್ಯ ಶಿಕ್ಷಕ ದಿನೇಶ್, ಸಹ ಶಿಕ್ಷಕರು, ಗ್ರಾಮಸ್ಥರು ಇದ್ದರು.