Milk draw 
ಮೈಸೂರು

17 ರಂದು ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ

ಹನೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಆರ್‌ಎಂಸಿ) ಆವರಣದಲ್ಲಿ ಜ.17 ರಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಸುಗಳಿಂದ ಅಧಿಕ ಹಾಲು ಕರೆಯುವ ತಾಲೂಕು ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರೈತರು ಭಾಗವಹಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಅಧಿಕ ಹಾಲು ಕರೆಯುವ ಹಸುಗಳ ಮಾಲೀಕರಿಗೆ ಪ್ರಥಮ ಬಹುಮಾನ 10 ಸಾವಿರ ರೂ, ದ್ವಿತೀಯ ಬಹುಮಾನ 7,500 ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಗುವುದು.
ರೈತರು ಹನೂರು ತಾಲೂಕಿನವರಾಗಿರಬೇಕು. ಬೆಳಗ್ಗೆ 6.30 ಗಂಟೆ ಹಾಗೂ ಸಂಜೆ 5.30ಕ್ಕೆ ಕರೆದ ಹಾಲನ್ನು ತೂಕ ಮಾಡಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಒಮ್ಮೆ ಸ್ಪರ್ಧೆ ಆವರಣಕ್ಕೆ ಕರೆ ತಂದು ಹಸುಗಳನ್ನು ಇಲ್ಲಿಯೇ ಇರಿಸಬೇಕು. ಯಾವುದೇ ಕಾರಣಕ್ಕೂ ಹಸುವನ್ನು ಮನೆಗೆ ಕರೆದೊಯ್ಯುವಂತಿಲ್ಲ. ಹಸುಗಳಿಗೆ ಮೇವು, ತಿಂಡಿ ಹಾಗೂ ನೀರಿನ ಬಕೆಟ್‌ಅನ್ನು ಮಾಲೀಕರೇ ತರಬೇಕು. ಇದು ಸ್ಪರ್ಧೇಯ ನಿಯಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯ ಸಂಸ್ಥೆ ಹಾಗೂ ಮೊಬೈಲ್ ಸಂಖ್ಯೆ ಮೊ: 7760550605ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.